ಲೋಕಸಭೆ-ವಿಧಾನಸಭೆಗಳ ಚುನಾವಣೆಗಿಂತಲೂ ಗ್ರಾಮಪಂಚಾಯತ ಚುನಾವಣೆ ಗೆಲ್ಲುವುದು ಯುದ್ಧವನ್ನ ಗೆದ್ದು ಬಂದಷ್ಟೇ ಮಹತ್ವದ್ದಾಗಿರುತ್ತದೆ. ಇಲ್ಲೊಬ್ಬ ಅಭ್ಯರ್ಥಿ ಚುನಾವಣೆ ಗೆಲ್ಲುತ್ತಿದ್ದಂತೆ ಹೆಗಲ ಮೇಲೆ ಎತ್ತುಕೊಂಡು ಮೆರವಣಿಗೆ ನಡೆಸಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ಪಂಚಾಯತಿ ಚುನಾವಣೆಯಲ್ಲಿ ಗೆದ್ದದ್ದು ಗಂಡ.. ಹೆಗಲು ಮೇಲೆ ಹೊತ್ತಿಕೊಂಡವಳು ಹೆಂಡತಿ…ಹೀಗೆ ಹೆಗಲ ಮೇಲೆ ಪತಿಯನ್ನೇ ಹೊತ್ತಿಕೊಂಡ ಪತ್ನಿ… ಗ್ರಾಮದಲ್ಲಿ ನಡೆಯುತ್ತಿದೆ ಭಾರಿ ವಿಜಯ ಯಾತ್ರೆ…ಹೌದು, ಈ ದೃಶ್ಯಗಳು ಕಂಡು ಬಂದಿದ್ದು, ಮಹಾರಾಷ್ಟ್ರ ರಾಜ್ಯ ಪುಣೆಯ ಪಾಳು ಗ್ರಾಮದ್ದು. ಸಂತೋಷ ಗುರವ ಈ ಬಾರಿ ಪಾಳು ಗ್ರಾಮ ಪಂಚಾಯತಿ ಚುನಾವಣೆಯ ಅಖಾಡಕ್ಕೆ ಇಳಿದಿದ್ದರು. 221 ಮತಗಳನ್ನ ಪಡೆದು ಚುನಾವಣೆಯಲ್ಲಿ ಗೆದ್ದಿದ್ದಾನೆ. ಇಂದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪತ್ನಿ ರೇಣುಕಾ ತನ್ನ ಪತಿ ಸಂತೋಷನನ್ನ ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿದ್ದಾಳೆ.
ಚುನಾವಣೆಯಲ್ಲಿ ಗೆದ್ದ ಬಳಿಕ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನ ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುವುದನ್ನ ನಾವು ನೀವೆಲ್ಲ ನೋಡಿದ್ದೇವೆ. ಆದರೇ ಗಂಡನ ಗೆಲುವಿಗೆ ಹೆಂಡತಿಯೇ ಗಂಡನನ್ನ ಹೆಗಲ ಮೇಲೆ ಹೊತ್ತಿಕೊಂಡಿದ್ದು, ಎಲ್ಲರ ಮುಖದ ಮೇಲೆ ನಗೆಯನ್ನ ಸೂಸಿದೆ.