Belagavi

ಚಿನ್ನವಾರಿ ಗುಡ್ಡ ಪ್ರದೇಶದಲ್ಲಿ ತಡೆಗೋಡೆ, ಸುಸಜ್ಜಿತ ರಸ್ತೆ ನಿರ್ಮಾಣ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕಾರ್ಯಕ್ಕೆ ಪ್ರಶಂಸೆ

Share

ಅಪಘಾತ ವಲಯ ಎಂದೇ ಕರೆಯಲ್ಪಡುವ ಕೆಕೆ ಕೊಪ್ಪ ಬಳಿಯ ಚಿನ್ನವಾರಿ ಗುಡ್ಡ ಪ್ರದೇಶದ ಬಹುಮುಖ್ಯ ಬೇಡಿಕೆಯಾಗಿದ್ದ ತಡೆಗೋಡೆ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣ ಬೇಡಿಕೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಈಡೇರಿಸಿದ್ದಾರೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶಾಸಕರಾಗಿ ಆಯ್ಕೆಯಾದ ನಂತರ ಅವರ ಆದ್ಯತೆಯ ಕೆಲಸಗಳಲ್ಲಿ ಒಂದಾದ ಹಾಗೂ 40 ವರ್ಷಗಳಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ಬಹುಮುಖ್ಯ ಬೇಡಿಕೆಯಾಗಿದ್ದ ಕೆಕೆ ಕೊಪ್ಪ ಬಳಿಯ ಚಿನ್ನವಾರಿ ಗುಡ್ಡ ಪ್ರದೇಶದ ತಡೆಗೋಡೆ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ. ಗ್ರಾಮಸ್ಥರು ಇದರಿಂದ ಹರ್ಷಗೊಂಡಿದ್ದರೆ, ಶಾಸಕಿ ತನ್ನ ಕೆಲಸ ಮಾಡಿ ಸಾರ್ಥಕವಾಯಿತು ಎಂದು ಹೇಳುತ್ತಿದ್ದಾರೆ.

ಕೆಕೆ ಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ಚಿನ್ನವಾರಿ ಗುಡ್ಡ ಮುಖ್ಯ ರಸ್ತೆಯ ಮೇಲಿದ್ದು, ಕೆಕೆ ಕೊಪ್ಪ, ಹಲಗಿಮರ್ಡಿ, ನಾಗೇರಹಾಳ, ನಾಗೇನಹಟ್ಟಿ, ಬಡಾಲ್ ಅಂಕಲಗಿ, ಹುಲಿಕವಿ ಮೊದಲಾದ ಗ್ರಾಮಗಳ ಜನರಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಇಲ್ಲಿ ಅಪಘಾತ ಎನ್ನುವುದು ಸಾಮಾನ್ಯ ಎನ್ನುವಂತಾಗಿತ್ತು. ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಸಂದರ್ಭದಲ್ಲಿ ಟ್ರಾಕ್ಟರ್ ಗಳು ಉರುಳಿ ಬಿದ್ದು ಸಂಕಷ್ಟ ಅನುಭವಿಸುತ್ತಿದ್ದರು. ತಡೆಗೋಡೆ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣ 40 ವರ್ಷಗಳಿಂದ ಗ್ರಾಮಗಳ ಜನರ ಬಹುಮುಖ್ಯ ಬೇಡಿಕೆಯಾಗಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗಮನಕ್ಕೆ ಬಂದ ತಕ್ಷಣ ತ್ವರಿತವಾಗಿ ಸ್ಪಂದಿಸಿದರು. 4.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಇದೀಗ ಕೋಳಿವಾಡ ಗ್ರಾಮದಿಂದ ಕೆಕೆ ಕೊಪ್ಪ ಗ್ರಾಮದವರೆಗೆ ರಸ್ತೆಯ ಡಾಂಬರೀಕರಣ ಹಾಗೂ ತಡೆಗೊಡೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.

ಗ್ರಾಮದ ಜನರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ತುರ್ತು ಸ್ಪಂದನೆಗೆ ಮನಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
ಈಗ ಈ ರಸ್ತೆ ಮೇಲೆ ಎಲ್ಲ ಗ್ರಾಮಗಳ ಜನರ ಯಾವುದೇ ಭಯವಿಲ್ಲದೆ ಸರಾಗ ಹಾಗೂ ಸುಗಮವಾಗಿ ಸಾಗುತ್ತಿರುವುದನ್ನು ನೋಡಿ ಖುಷಿ ಎನಿಸುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹರ್ಷ ವ್ಯಕ್ತಪಡಿಸಿದ್ದಾರೆ.

Tags:

error: Content is protected !!