Chikkodi

ಚಿಕ್ಕೋಡಿ v/s ಗೋಕಾಕ ಜಿಲ್ಲಾ ಹೋರಾಟ!!

Share

ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಈಗ ಜಿಲ್ಲಾ ವಿಭಜನೆಯದ್ದೆ ದೊಡ್ಡ ಕೂಗು ಕೇಳಿ ಬರ್ತಿದೆ. ದಶಕದಿಂದಲೂ ಸಹ ಚಿಕ್ಕೋಡಿ ಗೋಕಾಕ ಎರಡೂ ಪ್ರತ್ಯೇಕ‌‌‌ ಜಿಲ್ಲೆಗಳಾಗಬೇಕು ಎಂದು ಹೋರಾಟ ನಡೆದಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಚಿಕ್ಕೋಡಿ ಬಿಟ್ಟು ಗೋಕಾಕ ಮಾತ್ರ ಜಿಲ್ಲೆ ಮಾಡೋಕೆ ಮುಂದಾಗಿದ್ದಾರೆ. ಎನ್ನುವ ಆರೋಪಗಳನ್ನ ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಮಾಡುವ ಮೂಲಕ ಜಿಲ್ಲೆಗಾಗಿ ಚಿಕ್ಕೋಡಿ ಗೋಕಾಕ ಗಳ ಫುಲ್ ಫೈಟ ನಡೆಯುತ್ತಿದೆ.

ಹೌದು ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಬೆಳಗಾವಿ ಜಿಲ್ಲೆ ಇಬ್ಬಾಗ ಆಗಬೇಕು ಎನ್ನುವುದು ದಶಕದ ಕೂಗು.. ಆದರೆ ಈವರೆಗೂ ಜಿಲ್ಲೆ ವಿಭಜನೆಯಾಗಿ ಅಧಕಾರ ವಿಕೇಂದ್ರೀಕರಣ ಸಾಧ್ಯವಾಗಿಲ್ಲ.. ೧೪ ತಾಲೂಕು ಹೊಂದಿರುವ ದೊಡ್ಡ ಜಿಲ್ಲೆಯನ್ನು ಒಡೆದು ಗೋಕಾಕ ಹಾಗೂ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ಹೋರಾಟಗಾರರು ಮನವಿ ಮಾಡುತ್ತಲೇ ಬಂದಿದ್ದಾರೆ‌.ಆದರೆ ಇಲ್ಲಿಯತನಕ ಅದು ಸಾಧ್ಯವಾಗಿಲ್ಲ ಇತ್ತಿಚಿಗಷ್ಟೆ ರಮೇಶ್ ಜಾರಕಿಹೊಳಿ ಕೂಡ ಜಿಲ್ಲಾ ವಿಚಾರವಾಗಿ ಮಾತಾಡಿ ಆದಷ್ಟು ಬೇಗ ಗೋಕಾಕ ಜಿಲ್ಲೆ ಮಾಡುವ ಸಲುವಾಗಿ ಮುಖ್ಯಮಂತ್ರಿ ಬಳಿ ನಿಯೋಗ ಕರೆದುಕೊಂಡು ಹೋಗೊಣ ಎಂದು ಹೋರಾಟಗಾರಿಗೆ ಭರವಸೆ ನೀಡುವ ಮೂಲಕ ಚಿಕ್ಕೋಡಿ ಜಿಲ್ಲಾ ಹೋರಾಟಗಾರಿಗೆ ಶಾಕ್ ನೀಡಿದ್ದಾರೆ.

ಗೋಕಾಕ ಜಿಲ್ಲಾ‌ ಹೋರಾಟಗಾರರ ಮನವಿ ಸ್ವೀಕರಿಸಿ ಹೀಗೆ ಮಾತಾಡಿದ್ದು ಈಗ ಚಿಕ್ಕೋಡಿ ಜಿಲ್ಲಾ ಹೋರಾಟಗಾರರ ಕಣ್ಣು ಕೆಂಪಾಗುವಂತೆ ಮಾಡಿದೆ. ಚಿಕ್ಕೋಡಿಗೆ ಬಂದಾಗ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡಿ ಎಂದು ಮನವಿ ಸಲ್ಲಿಸಿದರೆ ನೀವು ಟೆಕ್ನಿಕಲ್‌ ಸಮಸ್ಯೆ ಹೇಳ್ತಿರಿ ಆದರೆ ಗೋಕಾಕ ಜಿಲ್ಲಾ ಹೋರಾಟಗಾರರಿಗೆ ಮಾತ್ರ ಮುಖ್ಯಂಮತ್ರಿಗಳ ಬಳಿ ನಿಯೋಗ ಕೊಂಡೊಯ್ಯುವ ಭರಸವೆ ನೀಡ್ತಿರಿ ಅಂತ ರಮೇಶ್ ಜಾರಕಿಹೊಳಿ ವಿರುದ್ದ ಹಿರಿಯ ಹೋರಾಟಗಾರ ಬಿ ಆರ್ ಸಂಗಪ್ಪಗೋಳ ತಿವಿದಿದ್ದಾರೆ. ಅಲ್ಲದೆ ಚಿಕ್ಕೋಡಿ ಜಿಲ್ಲೆ ಮಾಡುವುದರಲ್ಲಿ ಯಾಕೆ ಅಡ್ಡಗಾಲು ಹಾಕ್ತಿದ್ದಿರಿ ಎಂದು ಪ್ರಶ್ನೆ ಮಾಡಿದ್ದಾರೆ..

ಒಟ್ಟಿನಲ್ಲಿ ಜೆ ಹೆಚ್ ಪಟೇಲರ ಕಾಲದಿಂದಲೂ ಸಹ ನೆನೆಗುದಿಗೆ ಬಿದ್ದಿರುವ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲಾ ರಚನೆಯ ಕನಸು ಈಗಲೂ ಹಾಗೇಯೇ ಸಾಗಿದೆ. ಮಾಡಿದರೆ ಚಿಕ್ಕೋಡಿ ಹಾಗೂ ಗೋಕಾಕ ಎರಡೂ ಜಿಲ್ಲೆ ಮಾಡಿ ಎನ್ನುವುದು ಹೋರಾಟಗಾರರ ಅಭಿಪ್ರಾಯ ಆದರೆ ಸಧ್ಯ ಜಿಲ್ಲೆಯಲ್ಲಾಗುತ್ತಿರುವ ಬೆಳವಣಿಗೆ ಮಾತ್ರ ಕುತೂಹಲ ಕೆರಳಿಸುವಂತಿರುವುದಂತೂ ನಿಜ…

Tags:

error: Content is protected !!