Uncategorized

ಚಿಕ್ಕೋಡಿ-ಸದಲಗಾ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿಯನ್ನಾಗಿ ಮಾಡುವೆ- ಶಾಸಕ ಗಣೇಶ ಹುಕ್ಕೇರಿ

Share

ಚಿಕ್ಕೋಡಿ ವಿಧಾನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಟ್ಟಣಕುಡಿ ಗ್ರಾಮದಲ್ಲಿ ಸುಮಾರು 80 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಪೇವರ ಬ್ಲಾಕ್ ಆಳವಡಿಕೆ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು.

ಪಟ್ಟಣಕುಡಿ ಗ್ರಾಮದ ಬೀರದೇವರ ಮಂದಿರ, ರಾಯನ್ನವರ ತೋಟ, ಹಾಲಸಿದ್ಧನಾಥ ಮಂದಿರ ಚಿಲಾಯಿ ಮರಟಿ, ಗೌರಾಯಿ ಮರಡಿ ವಸಾಹತು ಪ್ರದೇಶಗಳಲ್ಲಿ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಭೂಮಿ ಪೂಜೆ ನೆರವೇರಿಸಿದರು.

ವಾ.ಓ: ನಂತರ ಮಾಧ್ಯಮಗಳ ಜೊತೆ ಗಣೇಶ ಹುಕ್ಕೇರಿ ಮಾತನಾಡಿ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿ ಜನರಿಗೆ ಅನೂಕುಲ ಕಲ್ಪಿಸಬೇಕು. ಹಲವು ವರ್ಷಗಳ ಬೇಡಿಕೆ ಸಾಕಾರಗೊಂಡಿದ್ದು, ಮುಂದೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಮೂಲಕ ಚಿಕ್ಕೋಡಿ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವಾ.ಓ: ಬಳಿಕ ಗ್ರಾ.ಪಂ ಸದಸ್ಯ ವಿಠ್ಠಲ ಏಕಣೆ ಮಾತನಾಡಿ, ಗ್ತಾಮದ ಅಭಿವೃದ್ದಿಗೆ ನಮ್ಮ ನಾಯಕ ಗಣೇಶ ಹುಕ್ಕೇರಿ ಹಾಗೂ ಪ್ರಕಾಶ ಹುಕ್ಕೇರಿ ಅವರು ಗ್ರಾಮಕ್ಕೆ ಸಾಕಷ್ಟು ಅನುದಾನ ನೀಡಿದ್ದು ಅವರಿಗೆ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ವಾ.ಓ: ಈ ಸಂದರ್ಭದಲ್ಲಿ ವಿನೋದ ಕಾಗೆ, ಸಂಜಯ ಠಾನೆ, ಸುಕುಮಾರ ಡಿಗರೆ, ಅರಿಹಂತ ಕಾಗೆ, ಸಂತು ಕಾಗೆ, ಅರುಣ ನಾಯಿಕ, ಚೇತನ ರಾಯಗೊನ್ನವರ ಸೇರಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!