Chikkodi

ಚಿಕ್ಕೋಡಿ ತಾಲೂಕಿನಲ್ಲಿ ಶಾಲೆಗಳು ಓಪನ್… ಉತ್ಸಾಹದಿಂದ ಶಾಲೆಗಳತ್ತ ಮುಖ ಮಾಡಿದ ವಿದ್ಯಾರ್ಥಿಗಳು

Share

ಕಳೆದ ಒಂಭತ್ತು ತಿಂಗಳ ನಂತರ ಚಿಕ್ಕೋಡಿ ತಾಲೂಕಿನಲ್ಲಿ ಶಾಲೆಗಳು ಓಪನ್ ಆಗಿದ್ದು, ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಶಾಲೆಗಳತ್ತ ಮುಖ ಮಾಡಿದ್ದಾರೆ.

ಹೌದು ಕೋರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಕಳೆದ 9 ತಿಂಗಳುಗಳಿಂದ ಶಾಲಾ-ಕಾಲೇಜುಗಳಿಗೆ ರಜೆ ಯನ್ನು ಘೋಷಿಸಲಾಗಿತ್ತು. ಇವತ್ತು ಮತ್ತೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಚಿಕ್ಕೋಡಿ ತಾಲೂಕಿನಲ್ಲಿ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಆಗಮಿಸಿದ್ದಾರೆ. ಇನ್ನು ಶಾಲೆಗೆ ಬರತಕ್ಕಂತಹ ವಿದ್ಯಾರ್ಥಿಗಳಿಗೆ ಸೈನಿಟೈಸರ್, ಟೆಂಪರೇಚರ್ ಚೆಕ್ ಮಾಡಿ ಶಾಲೆಯ ಒಳಗೆ ಬಿಡಲಾಗುತ್ತಿದೆ.

ಇನ್ನು ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಂದು ಬೆಂಚಿನ ಮೇಲೆ ಒಂದು ವಿದ್ಯಾರ್ಥಿಗಳಿಗೆ ಕೂಡಲು ಅವಕಾಶವನ್ನು ಕಲ್ಪಿಸಲಾಗಿದೆ. 8ನೇ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮೂಲಕ ಪಾಠವನ್ನು ಮಾಡಲಾಗುತ್ತಿದೆ. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೂಲಕ ಶಾಲಾ ಕೊಠಡಿಗಳಲ್ಲಿ ಪಾಠವನ್ನು ಮಾಡಲಾಗುತ್ತಿದೆ. ಚಿಕ್ಕೋಡಿ ತಾಲೂಕಿನ ಪ್ರತಿಯೊಂದು ಶಾಲೆಗಳಲ್ಲಿ ಪ್ರಥಮತಃ ಮಹಾಮಾರಿ ಕೋರೋನಾ ರೋಗದ ಮುಂಜಾಗ್ರತಾ ಕ್ರಮಗಳಾದ ಸೈನಿಟೈಸರ, ಮಾಸ್ಕ್ ,ಸಾಮಾಜಿಕ ಅಂತರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಯಡೂರಿನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಹಿರೇಮಠರವರು ಇನ ನ್ಯೂಸ ಜೊತೆ ಮಾತನಾಡಿ ಇವತ್ತು ಶಾಲೆಗಳು ಪ್ರಾರಂಭವಾಗಿದ್ದು, ಕೊರೋನಾ ಮುಂಜಾಗ್ರತೆಯ ಎಲ್ಲಾ ಕ್ರಮಗಳನ್ನು ಕೈಗೊಂಡು ವಿದ್ಯಾರ್ಥಿಗಳನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡಿದ್ದೇವೆ ಎಂದರು.

ಒಟ್ಟಿನಲ್ಲಿ ಕೋರೋನಾ ಮಹಾಮಾರಿಯ ಇಂದ ಬಂದಾಗಿದ ಶಾಲೆಗಳು ಇವತ್ತು ಪ್ರಾರಂಭವಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಅತ್ಯಂತ ಸಂತಸವನ್ನು ತಂದಿದೆ.

Tags:

error: Content is protected !!