Chikkodi

ಚಿಕ್ಕೋಡಿ ಜಿಲ್ಲಾ ಹೋರಾಟಗಾರರಿಂದ ಜಾರಕಿಹೊಳಿ‌ ಸಹೋದರರ ವಿರುದ್ಧ ಆಕ್ರೋಶ

Share

ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡುವಂತೆ ಆಗ್ರಹಿಸಿ ಕಳೆದ 30 ವರ್ಷಗಳಿಂದ ಹೋರಾಟ ನಡೆಯುತ್ತಿದೆ ಆದರೂ ಕೂಡ ಇದುವರೆಗೆ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಲು ಯಾವೊಬ್ಬ ನಾಯಕರೂ ಮುಂದೆ ಬರುತ್ತಿಲ್ಲ ಚಿಕ್ಕೋಡಿಯನ್ನು ನಿರ್ಲಕ್ಷಿಸಿ ಗೋಕಾಕ್ ಜಿಲ್ಲೆ ಮಾಡಲು ಮುಂದಾದ ಜಾರಕಿಹೊಳಿ ಸಹೋದರರ ವಿರುದ್ಧ ಹಿರಿಯ ಹೋರಾಟಗಾರ ಬಿಆರ್ ಸಂಗಪ್ಪಗೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ,

ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು ಚಿಕ್ಕೋಡಿಯನ್ನು ನಿರ್ಲಕ್ಷಿಸಿ ಜಾರಕಿಹೊಳಿ ಸಹೋದರರು ಗೋಕಾಕನ್ನು ಜಿಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಜಾರಕಿಹೊಳಿ ಸಹೋದರರು ಮತ್ತು ಸರ್ಕಾರದ ವಿರುದ್ಧ ಬಿಆರ್ ಸಂಗಪ್ಪಗೋಳ ವಾಗ್ದಾಳಿ ನಡೆಸಿದ್ದಾರೆ,

ಕಳೆದ 30 ವರ್ಷಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದೆ ನಮ್ಮ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ಬಂದು ವಿಷ ಸೇವಿಸಲೂ ಸಿದ್ಧ ಎಂದಿದ್ದರು ಆದರೆ ಇದುವರೆಗೂ ಜಿಲ್ಲೆ ಮಾಡಲು ಯಾವ ನಾಯಕರೂ ಮುಂದೆ ಬರುತ್ತಿಲ್ಲ ಸಿದ್ದರಾಮಯ್ಯ ಸರಕಾರವಿದ್ದಾಗ ಕೂಡ ಚಿಕ್ಕೋಡಿ ಜಿಲ್ಲೆ ಮಾಡುವದಾಗಿ ಹೇಳಿದ್ದರು ಚಿಕ್ಕೋಡಿಯದಲ್ಲೀಗ 4 ಸಚಿವರು,ಹಾಗೂ ಸಂಸದರು ಸೇರಿದಂತೆ ಹಿರಿಯ ನಾಯಕರಿದ್ದಾರೆ ಆದರೆ ಚಿಕ್ಕೋಡಿ ಜಿಲ್ಲೆ ಮಾಡುವ ಬಗ್ಗೆ ಯಾರೊಬ್ಬರೂ ಕೂಡ ಬಾಯಿ ಬಿಚ್ಚುತ್ತಿಲ್ಲ
ಎಂದು ಆಕ್ರೋಶ ವ್ಯಕ್ತಪಡಿಸಿದರು ,

ಶೀಘ್ರದಲ್ಲೇ ಚಿಕ್ಕೋಡಿ ಜಿಲ್ಲೆಯಾಗದಿದ್ದರೆ ಆಮರಣ ಉಪವಾಸ ಸತ್ಯಾಗ್ರಹ ನಡೆಸುವದು ಅನಿವಾರ್ಯವಾಗುತ್ತದೆ ಮುಂದಿನ ದಿನಮಾನಗಳಲ್ಲಿ ಎಲ್ಲ ತಾಲೂಕುಗಳಿಗೆ ತೆರಳಿ ಜನ ಸಹಿ ಸಂಗ್ರಹ ಮಾಡಿ ಸಿಎಂ ಎದುರು ನಮ್ಮ ನಿಯೋಗದೊಂದಿಗೆ ಹೋಗುತ್ತೇವೆ ಯಾರು ಬರಲಿ ಬಿಡಲಿ ನಾವು ಚಿಕ್ಕೋಡಿ ಜಿಲ್ಲೆ ಮಾಡುವವರೆಗೂ ಹೋರಾಟ ಕೈಬಿಡುವುದಿಲ್ಲ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಿಯೇ ತೀರುತ್ತೇವೆ ಎಂದು ಹಿರಿಯ ಹೋರಾಟಗಾರ ಬಿಆರ್ ಸಂಗಪ್ಪಗೋಳ ತಿಳಿಸಿದ್ದಾರೆ,

ಮತ್ತೊಮ್ಮೆ ಅವರು ಚಿಕ್ಕೋಡಿಯನ್ನು ನಿರ್ಲಕ್ಷಿಸಿ ಗೋಕಾಕನ್ನು ಜಿಲ್ಲೆ ಮಾಡಲು ಮುಂದಾದ ಜಾರಕಿಹೊಳಿ ಸಹೋದರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

Tags:

error: Content is protected !!