Raibag

ಚಿಂಚಲಿ ಮಹಾಕಾಳಿ ಚಾಂಪಿಯನ್ ಫುಟ್‍ಬಾಲ್ ಟ್ರೋಪಿ ಕೊಲ್ಹಾಪೂರ ಶಿವಾಜಿ ತರುಣ ತಂಡಕ್ಕೆ

Share

ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಹಮ್ಮಿಕೊಂಡಿದ್ದ “ಮಹಾಕಾಳಿ ಚಾಂಪಿಯನ್ ಟ್ರೋಪಿ-2021ರ ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕೊಲ್ಹಾಪೂರದ ಶಿವಾಜಿ ತರುಣ ಫುಟಬಾಲ್ ತಂಡ ಗೆದ್ದು ಪ್ರಶಸ್ತಿ ಬಾಚಿಕೊಂಡಿದೆ.

ಹೌದು ಚಿಂಚಲಿ ಪಟ್ಟಣದ ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆಯ ಡಾ. ಬಿ.ಆರ್.ಅಂಬೇಡ್ಕರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾಕಾಳಿ ಫುಟಬಾಲ್ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ “ಮಹಾಕಾಳಿ ಚಾಂಪಿಯನ್ ಟ್ರೋಫೀ-2021” ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಫೈನಲ್ ಪಂದ್ಯಾವಳಿಯು ಶಿವಾಜಿ ತರುಣ ಫುಟಬಾಲ ತಂಡ ಕೊಲ್ಹಾಪೂರ ಹಾಗೂ ಬಾಲ ಗೋಪಾಲ ಫುಟಬಾಲ್ ಕೊಲ್ಹಾಪುರ ತಂಡಗಳ ನಡುವೆ ನಡೆಯಿತು. ಈ ವೇಳೆ ಶಿಜಾಜಿ ತರುಣ ಫುಟ್‍ಬಾಲ್ ತಂಡ ಒಂದು ಗೋಲಿನ ಅಂತರದಲ್ಲಿ ಟ್ರೋಪಿಯನ್ನು ಮುಡಿಗೇರಿಸಿಕೊಂಡಿತು.

ಆರಂಭದಲ್ಲಿ ಎರಡು ತಂಡಗಳು 1-1 ಗೋಲು ಪಡೆದುಕೊಂಡು ಸಮಾನಾಂತರ ಕಾಯ್ದುಕೊಂಡಿದ್ದವು. ನಂತರ ಪೆನಾಲ್ಟಿ ಮೂಲಕ 4-5 ಗೋಲು ಆಗಿದ್ದರಿಂದ ಕೊಲ್ಹಾಪುರದ ಶಿವಾಜಿ ತರುಣ ಫುಟಬಾಲ್ ತಂಡ ರೋಚಕ ಗೆಲುವು ದಾಖಲಿಸಿತು. ಈ ವೇಳೆ ಎಂಎಲ್‍ಸಿ ವಿವೇಕರಾವ್ ಪಾಟೀಲ್ ವಿಜೇತ ಶಿವಾಜಿ ತರುಣ ತಂಡಕ್ಕೆ 50 ಸಾವಿರ ರೂಪಾಯಿ ಹಾಗೂ ಒಂದು ಟ್ರೋಫಿಯನ್ನು ವಿತರಣೆ ಮಾಡಿದರು. ಅದೇ ರೀತಿ ದ್ವಿತೀಯ ಸ್ಥಾನ ಪಡೆದ ಕೊಲ್ಹಾಪೂರ ಬಾಲ ಗೋಪಾಲ ಫುಟಬಾಲ್ ತಂಡಕ್ಕೆ 25 ಸಾವಿರ ಬಹುಮಾನ ಹಾಗೂ ಒಂದು ಟ್ರೋಫಿಯನ್ನು ಶ್ರೀ ಮಹಾಕಾಳಿ ದೇವಸ್ಥಾನದ ಕಮೀಟಿ ಅಧ್ಯಕ್ಷ ಜೆ.ಆರ್.ಜಾಧವ ಅವರು ನೀಡಿ ಗೌರವಿಸಿದರು.

ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿಯ ನಿರ್ಣಾಯಕರಾದ ಇಬ್ರಾಹಿಮ್, ದರ್ಶನ, ಶಾಮ ಸುಂದರ, ಅನಿಲ ವಿನಾಯಕ ಅವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಡಿ.ಎಸ್.ಡಿಗ್ರಜ್, ಮಿ. ಇಂಡಿಯಾ ಬೆಳಗಾವಿ ಸುನೀಲ ಅಪ್ಟೇಕರ್, ಮಹದೇವ ಪಡೋಳಕರ, ಡಾ. ಸಿ.ಬಿ.ಕುಲಗುಡ, ಕೆಎಂಎಫ್ ಉಪ ವ್ಯವಸ್ಥಾಪಕ ಎಸ್.ಜಯಾನಂದ, ಅಣ್ಣಾಸಾಹೇಬ ದೇಸಾಯಿ, ರಾಜು ಬಣಗೆ, ಅಮೀತ ಚೌಗಲಾ ಮತ್ತು ವಿಶ್ವನಾಥ ಪಾಟೀಲ ಸೇರಿದಂತೆ ಬೆಳಗಾವಿ ಹಾಲು ಒಕ್ಕೂಟ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:

error: Content is protected !!