ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪಿಎಸ್ ಐಯೊಬ್ಬರು ಅಭ್ಯರ್ಥಿಗೆ ಸಹಕರಿಸಿ ಅಭ್ಯರ್ಥಿಯ ಗೆಲುವಿಗೆ ಹಾದಿಮಾಡಿಕೊಟ್ಟಿದಕ್ಕೆ PSIಗೆ ಠಾಣೆಯಲ್ಲೇ ಸನ್ಮಾನಿಸಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ತಾಳಿಕೋಟೆ ಠಾಣಾ ಪಿಎಸ್ಐ ಗಂಗೂಬಾಯಿ ಬಿರಾದಾರ ತಾಳಿಕೋಟೆ ತಾಲೂಕಿನ ಬಳವಾಟ ಗ್ರಾಪಂ ಚುನಾವಣೆಯಲ್ಲಿ ಬಸನಗೌಡ ಸಾಸನೂರ ಗೆಲುವಿಗೆ ಸಹಕರಿಸಿದ್ದಾರೆ. ಅದಕ್ಕಾಗಿ ನಂತರ ಠಾಣೆಯ ಎದುರು ಪೊಲೀಸ್ ಪೇದೆ ಶಿವನಗೌಡ ಬಿರಾದಾರ ಹಾಗೂ ಪಿಎಸ್ಐ ಗಂಗೂಬಾಯಿಯವರಿಗೆ ಸನ್ಮಾನ ಮಾಡಿದ್ದಾರೆ. ಬಳಿಕ ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸಹಕರಿಸಿದ್ದಕ್ಕೆ ಪಿಎಸ್ಐ ಜಿ.ಜಿ. ಬಿರಾದಾರ ಮೇಡಂ, ನಮ್ಮೂರು ಹಿತೈಷಿ ಪೊಲೀಸ್ ಆರಕ್ಷಕ ಶಿವನಗೌಡ ಬಿರಾದಾರರನ್ನು ಭೇಟಿಯಾಗಿ ಗೆಲುವಿಗೆ ಸಹಕರಿಸಿದ್ದಕ್ಕೆ ಗೌರವ ಸನ್ಮಾನ ಎಂದು ಫೇಸ್ ಬುಕ್ ನಲ್ಲಿ ಬಸವರಾಜ ಭಜಂತ್ರಿ ಎಂಬುವರಿಂದ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಫೋಸ್ಟ್ ನೋಡಿದ ನೆಟ್ಟಿಗರ ಆಕ್ರೋಶ ಹೊರಬೀಳುತ್ತಿದಂತೆ ಆ ಫೋಸ್ಟ್ ಡಿಲಿಟ್ ಮಾಡಿದ್ದಾರೆ. ಅಷ್ಟರಲ್ಲಿ ಫೇಸ್ ಬುಕ್ ಪೋಸ್ಟ್ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಕಲ್ ವೈರಲ್ ಆಗಿದ್ದು, ಈ ಇಬ್ಬರು ಪೊಲೀಸ್ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ…