ಗೋ ಕತ್ತರಿಸಿ, ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿ ಬಂಧಿಸಿರುವ ಘಟನೆ ನಡೆದಿದೆ. ಗೋ ಹತ್ಯೆ ನಿಷೇಧ ಕಾಯ್ದೆಯಡಿ ಬಂಧಿಸಲಾಗಿದ್ದು ವಿಜಯಪುರ ಜಿಲ್ಲೆಯ ಕೂಡಗಿ ಗ್ರಾಮದ ಸಿಕಂದರಸಾಬ ರಾಜೇಸಾಬ ಬೇಪಾರಿ (35) ಬಂಧಿತ ಆರೋಪಿಯಾಗಿದ್ದು
ಸಿಕಂದರಸಾಬ ಬೇಪಾರಿ ಕೊಲ್ಹಾರ ಸಂತೆಯಲ್ಲಿ ರೈತನಿಂದ ಗೋ ಖರೀದಿಸಿದ್ದ ಖಚಿತ ಮಾಹಿತಿ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಾಗೂ ಪೊಲೀಸರು ಕಸಾಯಿಖಾನೆ ಸ್ಥಳಕ್ಕೆ ತೆರಳಿ, ಆರೋಪಿಯ ಬಂಧಿಸಿ ಇನ್ನೊಂದು ಗೋ ರಕ್ಷಣೆ ಮಾಡಿದ್ದಾರೆ. ಪಿಎಸ್‌ಐ ರೇಣುಕಾ ಜಕನೂರ ನೇತೃತ್ವದಲ್ಲಿ ದಾಳಿ ನಡೆದಿದ್ದು ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…