ಖಾನಾಪೂರ ಗೋಲಿಹಳ್ಳಿ ಅರಣ್ಯ ವಲಯದ ಬಿಳಕಿ ಬಳಿ ಚಿರತೆ ಕಾಣಿಸಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಲು ಪರಿಶೀಲನೆ ಮಾಡಿದ್ದಾರೆ.
ಪಾರಿಶ್ವಾಡ ರಸ್ತೆಯ ಬಿಳಕಿ, ಅವರೊಳ್ಳಿ, ಕಡತನ ಬಾಗೆವಾಡಿ ಬಳಿಯ ಗ್ರಾಮಗಳ ಸುತ್ತ ಚಿರತೆ ಓಡಾಡುತ್ತಿರುವ ಮಾಹಿತಿ ನಿನ್ನೆ ನಡೆದ ಕಾರಣ ವಲಯ ಅರಣ್ಯಾಧಿಕಾರಿ ಶ್ರೀನಾಥ ಕಡೋಲಕರ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆ ಚಲನವಲನದ ತಪಾಸಣೆಗೆ ಇಳಿದಿದ್ದಾರೆ.
ಚಿರತೆ ಕಾಣಿಕೊಂಡಿದ್ದರೆ ಜನ ಆತಂಕ ಪಡದೆ ಖಚಿತ ಮಾಹಿತಿ ನೀಡಬೇಕು, ಅರಣ್ಯ ಇಲಾಖೆ ಸೂಕ್ತ ಕಾರ್ಯಾಚರಣೆ ನಡೆಸುತ್ತದೆ ಎಂದು ಆರ್ ಎಫ್ ಓ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.
ಬಿಳಕಿ ಬಳಿ ಕೆರೆಯಲ್ಲಿ ನೀರು ಕುಡಿಯಲು ಚಿರತೆ ಬಂದಿರಬಹುದು, ಕಾಡಂಚಿನ ಗ್ರಾಮಗಳಲ್ಲಿ ಜನತೆ ಜಾಗೃತೆವಹಿಸಬೇಕು ಎಂದು ಮನವಿ ಮಾಡಿದರು.ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಯಾವುದೇ ರೀತಿಯ ಗುರುತುಗಳು ಪತ್ತೆಯಾಗಿಲ್ಲ, ಇನ್ನು ಕೂಡಾ ಪರಿಶೀಲನೆ ನಡೆಸುವ ಮಾಹಿತಿ ವಲಯ ಅರಣ್ಯಾಧಿಕಾರಿ ಶ್ರೀನಾಥ್ ಕಡೋಲಕರ ನೀಡಿದ್ದಾರೆ.