ಬೆಳಗಾವಿ ಜಿಲ್ಲೆಯ ಗೃಹ ರಕ್ಷಕ ದಳದಲ್ಲಿ 360 ಸ್ವಯಂ ಸೇವಕ ಗೃಹ ರಕ್ಷಕ ಸದಸ್ಯ ಸ್ಥಾನಗಳಿಗೆ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜನವರಿ 18 ಹಾಗೂ 19ರಂದು ಬೆಳಗಾವಿ ಕವಾಯತು ಮೈದಾನದಲ್ಲಿ ನಡೆಯಲಿದೆ.
ಜನವರಿ 18ರಂದು ಬೆಳಗಾವಿ, ಖಾನಾಪುರ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಗೋಕಾಕ ಹಾಗೂ ಮೂಡಲಗಿ ತಾಲೂಕು ವ್ಯಾಪ್ತಿಯ ಅಭ್ಯರ್ಥಿಗಳು, 19ರಂದು ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಅಥಣಿ, ಕಾಗವಾಡ, ಕಿತ್ತೂರು ತಾಲೂಕು ವ್ಯಾಪ್ತಿಯ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿಯೊಂದಿಗೆ ಲಗತ್ತಿಸಿದ ದಾಖಲಾತಿಗಳ ಮೂಲ ಪ್ರತಿಗಳೊಂದಿಗೆ ಹಾಜರಾಗಬೇಕು. ಗೃಹ ರಕ್ಷಕ ದಳ ಸದಸ್ಯ ಸ್ಥಾನವು ನಿಷ್ಕಾಮ ಸೇವೆಯಾಗಿದ್ದು, ಯಾವುದೇ ಮಾಸಿಕ ಸಂಬಳ ಇರುವುದಿಲ್ಲ ಎಂದು ಬೆಳಗಾವಿ ಜಿಲ್ಲೆಯ ಗೃಹರಕ್ಷಕ ದಳದ ಅಧೀಕ್ಷಕರು ತಿಳಿಸಿದ್ದಾರೆ.