ಗುಮ್ಮಟನಗರಿ ವಿಜಯಪುರದಲ್ಲಿ ಬಿಜೆಪಿ ಬಿಜೆಪಿಯ ಜನಸೇವಕ ಸಮಾವೇಶಕ್ಕೆ ಚಾಲನೆ ದೊರೆಯಿತು. ಸಸಿಗೆ ನೀರು ಉಣಿಸೊ ಮೂಲಕ ಚಾಲನೆ ವಿವಿಧ ಮುಖಂಡರು ಚಾಲನೆ ನೀಡಿದರು. ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶ ಸಮಾವೇಶದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸಚಿವ ವಿ ಸೋಮಣ್ಣ, ಸಂಸದ ರಮೇಶ ಜಿಗಜಿಣಗಿ, ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ವಿಜಯಪುರ ನಗರ ಶಾಸಕ ಬಸನಗೌಡಾ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ ಸೇರಿದಂತೆ ಹಲವು ಮಾಜಿ ಶಾಸಕರು, ಮಾಜಿ ಸಚಿವರು, ಮುಖಂಡರು ಭಾಗಿಯಾಗಿದ್ದರು.
ಇನ್ನೂ ಸಮಾವೇಶ ದಲ್ಲಿ ವೇದಿಕೆ ಹಂಚಿಕೊಂಡ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವೇದಿಕೆ ಹಂಚಿಕೊಂಡು ಅಕ್ಕ ಪಕ್ಕದಲ್ಲಿ ಆಸೀನರಾಗಿದ್ದು ಗಮನ ಸೆಳೆಯಿತು.ಇನ್ನೂ ಕಾರ್ಯಕ್ರಮಕ್ಕೆ ಆಗಮಿಸುವಾಗ ಬಿಜೆಪಿ ನೂತನ ಗ್ರಾ.ಪಂ ಸದಸ್ಯರಿಗೆ ಡಿಸಿಎಂ, ಸಚಿವರಿಂದ ಹೂಮಳೆ ಯಾಯಿತು. ಗ್ರಾ.ಪಂ ಸದಸ್ಯರಿಗೆ ಪುಷ್ಪವೃಷ್ಟಿ ಮೂಲಕ ಡಿಸಿಎಂ ಕಾರಜೋಳ, ಸಚಿವ ವಿ ಸೋಮಣ್ಣರಿಂದ ನೂತನ ಗ್ರಾ.ಪಂ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು…