ಖಾನಾಪೂರ ತಾಲೂಕಿನ ಗಣೇಬೈಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಲಸಿಕೆ ಹಾಕುವ ಕಾರ್ಯಕ್ರಮ ಜರುಗಿತು. ಮೊದಲು ಲಸಿಕೆ ಹಾಕಿಸಿಕೊಂಡ ಸಿಬಂದಿಗೆ ಡಾಕ್ಟರ್ ರಾಜಶ್ರೀ ಪಾಟೀಲರು ಚಪ್ಪಾಳೆ ತಟ್ಟುವ ಮೂಲಕ ಪೆÇ್ರೀತ್ಸಾಹಿಸಿ ಮನೋಬಲವನ್ನು ಹೆಚ್ಚಿಸುವ ಕಾರ್ಯ ಮಾಡಿದರು.
: ಖಾನಾಪೂರ ತಾಲೂಕಿನ ಗಣೇಬೈಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಲಸಿಕೆ ಹಾಕುವ ಕಾರ್ಯಕ್ರಮ ಬುಧವಾರ ಜರುಗಿತು. ಎಲ್ಲ ಸಿಬ್ಬಂದಿಗಳು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಲಂಕರಿಸಿ ಹಬ್ಬದ ತರಹ ವಾತಾವರಣ ನಿರ್ಮಿಸಿದ್ದರು. ದೀಪ ಪ್ರಜ್ವಲಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಡಾ.ರಾಜಶ್ರೀ ಪಾಟೀಲ ಚಾಲನೆ ನೀಡಿದರು.
ಮೊದಲು ಲಸಿಕೆ ಹಾಕಿಸಿಕೊಂಡ ಸಿಬ್ಬಂದಿಗೆ ಡಾಕ್ಟರ್ ರಾಜಶ್ರೀ ಪಾಟೀಲರು ಚಪ್ಪಾಳೆ ತಟ್ಟುವ ಮೂಲಕ ಪೆÇ್ರೀತ್ಸಾಹಿಸಿ ಮನೋಬಲವನ್ನು ಹೆಚ್ಚಿಸುವ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಡಾಕ್ಟರ್ ಸುರೇಖಾ ಕುಡಚಿ, ಜ್ಯೋತಿಬಾ ಗುರವ, ಮಹಾದೇವಿ ಗುರವ, ಜ್ಯೋತಿ ಮೋರೆ ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.