Khanapur

ಖಾನಾಪೂರ ಪಟ್ಟಣ ಪಂಚಾಯಿತಿಯಲ್ಲಿ ಸ್ಥಾಯಿ ಸಮಿತಿ ಮೊದಲ ಸಭೆ

Share

ಖಾನಾಪೂರ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಮಾದಾರ ಅಧ್ಯಕ್ಷತೆಯಲ್ಲಿ ಮೊದಲ ಸಭೆ ಜರುಗಿತು.

ಖಾನಾಪೂರ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಮೊದಲ ಸಭೆಯನ್ನು ಉದ್ದೇಶಿಸಿ ನಗರ ಸೇವಕ, ಸ್ಥಾಯಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಮಾದಾರ ಮಾತನಾಡಿ, ಖಾನಾಪುರ ಪಟ್ಟಣದ ವಿವಿಧ ವಾರ್ಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡು ಸಮಸ್ಯೆಗಳನ್ನು ಪರಿಹರಿಸಲು ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿವೇಕ್ ಬನ್ನಿ ಅವರ ಗಮನಕ್ಕೆ ತಂದರು.
ನಂತರ ಖುದ್ದಾಗಿ ಮಂಗ್ರಿಶನಗರ ,ಸಮರ್ಥನಗರ,ದುರ್ಗಾ ನಗರಗಳಿಗೆ ಎಲ್ಲ ಸಮಿತಿಯ ಸದಸ್ಯರೊಂದಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಮಜಹರ್ ಖಾನಾಪೂರಿ, ಉಪಾಧ್ಯಕ್ಷೆ ಲಕ್ಷ್ಮೀ ಅಂಕಲಗಿ, ಸದಸ್ಯೆ ಮೇಘಾ ಕುಂದರಗಿ, ರಫೀಕ್ ವಾರಿಮನಿ, ಅಪ್ಪಯ್ಯ ಕೊಡೋಳ್ಳಿ, ಸೇರಿದಂತೆ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!