ಹೌದು ಕಳೆದ ಡಿಸೆಂಬರ್ ನಲ್ಲಿ ಜರುಗಿದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ 620ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಖಾನಾಪೂರ ತಾಲೂಕಿನ ಪಾಟೀಲ್ ಗಾರ್ಡನ್ ನಲ್ಲಿ ಹಮ್ಮಿಕೊಂಡು ಅಭಿನಂದನೆ ಸಲ್ಲಿಸಿದರು.ಸಸ್ಸಿಗೆ ನೀರು ಹಾಕುವುದರ ಮೂಲಕ ಈ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ತಾಲೂಕಿನ ಅಭಿವೃದ್ಧಿಯಾಗಬೇಕೆಂದರೆ, ಗ್ರಾಮಗಳ ಅಭಿವೃದ್ಧಿಯಾದರೆ ಮಾತ್ರ ತಾಲೂಕು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ನಮ್ಮೆಲ್ಲರ ಗ್ರಾಮಗಳನ್ನು ಪಕ್ಷ ಭೇದ ಮರೆತು ಗ್ರಾಮದ ಏಳಿಗೆಗಾಗಿ ಶ್ರಮಿಸೋಣ ಮತ್ತು ಗ್ರಾಮಗಳ ಅಭಿವೃದ್ಧಿಗೆ ನಾನು ಸದಾ ಸಿದ್ಧ ನಿಮ್ಮ ಕೈ ಬಲ ಪಡಿಸೂವುದಾಗಿ ನಿಮ್ಮ ನೆರಳಾಗಿ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ ಎಂದರು.
ಇಲ್ಲಿ ಚುನಾವಣೆಯಲ್ಲಿ ಜಯಸಾಧಿಸಿ ಬಂದವರು ಯಾವ ಪಕ್ಷದವರೂ ಅಲ್ಲಾ ಎಂಬುದನ್ನು ಹೇಳಿ ಪಕ್ಷಾತೀತವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಹೇಳಿದ್ರು.ಈ ಸಂದರ್ಭದಲ್ಲಿ ತಾಹಶೀಲ್ದಾರ ರೇಷ್ಮಾ ತಾಳಿಕೋಟಿ ತಾ.ಪಂ ಎಇಓ ಅಡವಿಮಠ, ಲೋಕೋಪಯೋಗಿ ಇಲಾಖೆಯ ಅಧಿಕಾರಿ, ಸೇರಿದಂತೆ ಅಕ್ಷರ ದಾಸೋಹ ಅಧಿಕಾರಿ ಸೇರಿದಂತೆ ತಾಲೂಕಿನ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.