Khanapur

ಖಾನಾಪೂರ ತಾಲೂಕಿನ ಆರೂ ಜಿ.ಪಂ. ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ: ಮಂಡಳ ಅಧ್ಯಕ್ಷ ಸಂಜಯ್ ಕುಬಲ್

Share

ಖಾನಾಪೂರ ತಾಲೂಕಿನಲ್ಲಿ ಬಿಜೆಪಿ ಬಲಿಷ್ಠವಾಗಿದ್ದು ಆರಕ್ಕೆ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ನಾವು ನಮ್ಮ ಪಕ್ಷದ ಕಾರ್ಯಕರ್ತರನ್ನು ಆರಿಸಿ ತರುತ್ತೇವೆ. ಖಾನಾಪೂರ ಮಂಡಳದ ವತಿಯಿಂದ ಸುಮಾರು 6000 ಕಾರ್ಯಕರ್ತರು ಬೆಳಗಾವಿಯಲ್ಲಿ 17ರಂದು ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಖಾನಾಪೂರ ಮಂಡಳ ಅಧ್ಯಕ್ಷ ಸಂಜಯ್ ಕುಬಲ್ ತಿಳಿಸಿದರು.

ಖಾನಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾನಾಪೂರ ಮಂಡಳ ಅಧ್ಯಕ್ಷ ಸಂಜಯ್ ಕುಬಲ್, ಬರುವ ದಿನಾಂಕ 17ರಂದು ಗೃಹ ಸಚಿವ ಅಮಿತ್ ಷಾ ಅವರು ಬೆಳಗಾವಿ ಆಗಮಿಸುತ್ತಿದ್ದು, ಖಾನಾಪೂರ ಮಂಡಳದ ವತಿಯಿಂದ ಸುಮಾರು 6000 ಕಾರ್ಯಕರ್ತರು, ಎಲ್ಲ ಮೋರ್ಚಾ, ಯುವಮೋರ್ಚಾ, ಬ್ಲಾಕ್ ಕಮೀಟಿಯ ಪದಾಧಿಕಾರಿಗಳು ಈ ಕಾರ್ಯಕ್ರಮಕ್ಕೆ ಉಪಸ್ಥಿತರಿರುವರು ಎಂದರು.
ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೊಚೋರಿ ಮಾತನಾಡಿ ದಿನಾಂಕ 19 ರಂದು ಬೆಳಿಗ್ಗೆ 10 ಗಂಟೆಗೆ 621ಗ್ರಾಮ ಪಂಚಾಯಿತಿ ಸದಸ್ಯರಿಗೆ ಪಟ್ಟಣದ ಹೊರವಲಯದಲ್ಲಿರುವ ಶುಭಂ ಗಾರ್ಡನ್ ನಲ್ಲಿ ಸನ್ಮಾನ ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯ ಸಭಾ ಸದಸ್ಯ ಈರಣ್ಣ ಕಡ್ಡಾಡಿ, ಜಿಲ್ಲಾ ಅಧ್ಯಕ್ಷ ಸಂಜಯ್ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ,ಸಂಸದ ಅನಂತಕುಮಾರ್ ಹೆಗಡೆ ಆಗಮಿಸಿಲಿದ್ದು ನೂತನ ಸದಸ್ಯರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಧನಶ್ರಿ ಸರ್ ದೇಸಾಯಿ ಜಾಂಜೋಟಕರ್, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ಜಿತೇಂದ್ರ ಮಾದಾರ, ಸೋಶಿಯಲ್ ಮೀಡಿಯಾ ಪ್ರಮುಖ ರಾಜೇಂದ್ರ ರಾಯಕಾ, ಪ್ರಧಾನ ಕಾರ್ಯದರ್ಶಿ ಗುಂಡು ತೋಪ್ಪಿನಕಟ್ಟಿ ಸುನೀಲ್ ನಾಯಕ, ಅನಂತ್ ಪಾಟೀಲ್ ಉಪಸ್ಥಿತರಿದ್ದರು.

Tags:

error: Content is protected !!