ಖಾನಾಪೂರ ತಾಲೂಕಿನ ಕುಟ್ಹಿನೋ ನಗರ,ಅಸೋಗಾ ಎಸ್.ಸಿ ಕಾಲೋನಿ ಸೇರಿದಂತೆ ಗಾಂಧಿನಗರ ಹಲಕರ್ಣಿ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಚಾಲನೆ ನೀಡಿದರು.
ಕುಟ್ಹೀನೋ ನಗರದಲ್ಲಿ ಎಸ್ ಸಿ ಕಾಲೋನಿಯ ಸಿಸಿ ರಸ್ತೆಯ ಸಲುವಾಗಿ 30 ಲಕ್ಷ ರೂಪಾಯಿ ನಿಧಿ, ಅದರಂತೆ ಅಸೋಗಾ ಗ್ರಾಮದಲ್ಲಿಯ ಎಸ್ ಸಿ ಕಾಲೋನಿಯ ಸಿಸಿ ರಸ್ತೆಯ ಸಲುವಾಗಿ 30 ಲಕ್ಷ ರೂಪಾಯಿ ನಿದಿ,ü ಅದರಂತೆ ಗಾಂಧಿನಗರ ಎಸ್ ಸಿ ಕಾಲೋನಿಯ ಸಿಸಿ ರಸ್ತೆಯ ಸಲುವಾಗಿ 15ಲಕ್ಷದ ನಿಧಿ ಮಂಜುರುಗೊಳಿಸಿಕೊಂಡು ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅನೀತಾ ದಂಡಗಲ್ , ರಾಮಚಂದ್ರ ಪಾಟೀಲ್, ಸೇರಿದಂತೆ ಹಲಕರ್ಣಿ ಗ್ರಾಮಸ್ಥರು,ಅಸೋಗಾ ಗ್ರಾಮಸ್ಥರು ಕುಟೀನೂನಗರದ ಮುಖಂಡರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.