State

ಖಾತೆ ಬದಲು ಮಾಡಿದ್ದಕ್ಕೆ ಮಾಧುಸ್ವಾಮಿಗೆ ಇಲ್ವಂತೆ ಅಸಮಾಧಾನ..?

Share

ಖಾತೆ ಹಂಚಿಕೆ ಬಗ್ಗೆ ನಾನು ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ಸಣ್ಣ ನೀರಾವರಿ ಖಾತೆ ಮುಂದುವರಿಸುವಂತೆ ಎರಡು ದಿನಗಳ ಹಿಂದೆ ಸಿಎಂ ಬಳಿ ಕೇಳಿಕೊಂಡಿದ್ದೆ. ಅದು ಬಿಟ್ಟರೆ ಬೇರೆ ಯಾವುದೇ ಅಸಮಾಧಾನ ಇಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ವಾ.ಓ: ಹೌದು ಖಾತೆ ಹಂಚಿಕೆ ವಿಚಾರದಲ್ಲಿ ಸಿಎಂ ಬಿಎಸ್‍ವೈ ವಿರುದ್ಧ ಸಚಿವ ಮಾಧುಸ್ವಾಮಿ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿತ್ತು. ಆದ್ರೆ ಇದಕ್ಕೆಲ್ಲಾ ತೆರೆ ಎಳೆದಿರುವ ಮಾಧುಸ್ವಾಮಿ ಸಣ್ಣ ನೀರಾವರಿ ಖಾತೆ ಬಗ್ಗೆ ಆಸಕ್ತಿಯಿದೆ ಎಂದು ಸಿಎಂ ಬಳಿ ಹೇಳಿದ್ದೆ. ಆದ್ರೆ ಹೊಸಬರಿಗೆ ಖಾತೆ ನೀಡಬೇಕಾಗಿದೆ ಎಂದು ಹೇಳಿದ್ದರು. ಹೀಗಾಗಿ ಆ ಬಗ್ಗೆ ನಾನು ಏನೂ ಮಾತಾಡಲಿಲ್ಲ. ಸಣ್ಣ ನೀರಾವರಿ ನನಗೆ ಹೆಚ್ಚುವರಿಯಾಗಿ ಕೊಟ್ಟಿದ್ದರು. ನನಗೆ ಇಂತಹ ಖಾತೆ ಕೊಡಿ ಅಂತಾ ನಾನು ಕೇಳುವುದಿಲ್ಲ. ಸಿಎಂ ಕೊಟ್ಟ ಖಾತೆಯನ್ನು ನಾನು ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಡಾ.ಶಿವಕುಮಾರ್ ಶ್ರೀಗಳ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ವಿಚಾರವೂ ಮಾತನಾಡಿರುವ ಮಾಧುಸ್ವಾಮಿ ಈಗ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಕೇಂದ್ರ ಸಚಿವ ಸಾರಂಗಿಯವರು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

Tags:

error: Content is protected !!