Raibag

ಕ್ರೀಡೆಯ ತವರೂರು ಚಿಂಚಲಿಯಲ್ಲಿ ಕಣ್ಮನ ಸೆಳೆದ ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿ

Share

ಕ್ರೀಡೆಯ ತವರೂರಾದ ಚಿಂಚಲಿ ಪಟ್ಟಣದಲ್ಲಿ ರಾಷ್ಟ್ರ ಮಟ್ಟದ ಫುಟಬಾಲ್ ಪಂದ್ಯಾವಳಿಗೆ ಶ್ರೀಮಂತ ಮಾಲೋಜಿರಾಜೆ ಛತ್ರಪತಿ ಅವರು ಚಾಲನೆ ನೀಡಿ ಗ್ರಾಮೀಣ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.

ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆಯ ಡಾ.ಬಿ.ಆರ್.ಅಂಬೇಡ್ಕರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀ ಮಹಾಕಾಳಿ ಫುಟಬಾಲ್ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ “ಮಹಾಕಾಳಿ ಚಾಂಪಿಯನ್ ಟ್ರೋಫೀ-2021” ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿಗೆ ಕೊಲ್ಹಾಪುರ ಸಂಸ್ಥಾನ ಹಾಗೂ ಪಶ್ಚಿಮ ಭಾರತ ಫುಟಬಾಲ್ ಅಸೋಸಿಯೇಶನ್ ಉಪಾಧ್ಯಕ್ಷರಾದ ಶ್ರೀಮಂತ ಮಾಲೋಜಿರಾವ ಛತ್ರಪತಿ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ನಂತರ ಫುಟಬಾಲ ಕ್ರೀಡಾಂಗಣದ ಉದ್ಘಾಟನೆ ನೆರವೇರಿಸಿದರು.


ಚಿಂಚಲಿ ಪಟ್ಟಣದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು, ಕೇರಳ, ಮುಂಬೈಯ, ಕೊಲ್ಹಾಪೂರ, ಕೊಡಗು, ನಿಪ್ಪಾಣಿ, ಗಡಿಂಗ್ಲಜ, ರಾಯಬಾಗ, ಜಮಖಂಡಿ, ಮಿರಜ ಸಾಂಗಲಿ, ಗೋಕಾಕ, ಚಿಂಚಲಿ, ಬೆಳಗಾವಿ, ಫುಟಬಾಲ್ ತಂಡಗಳು ಭಾಗವಹಿಸಿದ್ದವು. ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಫುಟಬಾಲ್ ಕ್ರೀಡಾಪಟುಗಳಿಗೆ ಊಟ ಹಾಗೂ ವಸತಿಯ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಸಂಘಟಕರು ಆಯೋಜನೆ ಮಾಡಿದ್ದರು. ಈ ಸಂಬಂಧ ಈ ರಾಷ್ಟ್ರಮಟ್ಟದ ಫುಟಬಾಲ ಪಂದ್ಯಾವಳಿ ನಗರ ಪ್ರದೇಶ ಹಾಗೂ ಪಟ್ಟಣಗಳಲ್ಲಿ ಹೆಚ್ಚು ಆಯೋಜನೆ ಮಾಡಲಾಗುತ್ತದೆ. ಆದರೆ ದೇಶದಲ್ಲಿ ಪ್ರಪ್ರಥಮವಾಗಿ ಗ್ರಾಮೀಣ ಮಟ್ಟದಲ್ಲಿ ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡಿದು ವಿಶೇಷವಾಗಿದೆ. ಇದಕ್ಕೆ ಮುಖ್ಯವಾಗಿ ಕಾರಣಿಭೂತರು ಎಂಎಲ್‍ಸಿ ವಿವೇಕರಾವ್ ಪಾಟೀಲ ಹಾಗೂ ಗ್ರಾಮಸ್ಥರ ಶ್ರಮವೇ ಕಾರಣ ಎಂದು ಪಟ್ಟಣ ಪಂಚಾಯತಿ ಸದಸ್ಯರು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ ಸದಸ್ಯ ವಿವೇಕ ಪಾಟೀಲ, ಜೆ.ಆರ್.ಜಾಧವ, ಕೊಳಚೆ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ಅಶೋಕ ಅಸೋದೆ, ಪಟ್ಟಣ ಪಂಚಾಯತ ಅಧ್ಯಕ್ಷ ಮಹಾದೇವ ಪಡೋಳಕರ, ರಾಜು ಬಣಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!