Uncategorized

ಕ್ರೀಡೆಯಲ್ಲಿ ಯಶಸ್ವಿಯಾಗಬೇಕಾದ್ರೆ, ಕಠಿಣ ಪರಿಶ್ರಮ ಮುಖ್ಯ: ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ

Share

ಯಾವುದೇ ಕ್ರೀಡೆಯಲ್ಲಿ ಯಶಸ್ವಿಯಾಗಬೇಕಾದ್ರೆ, ಕಠಿಣ ಪರಿಶ್ರಮ ಮುಖ್ಯ. ಕ್ರೀಡಾಪಟುಗಳು ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ತಾಲೂಕಿನ ಕಡೋಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗೌಂಡವಾಡ ಗ್ರಾಮದಲ್ಲಿ ಭಾನುವಾರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಚಾಲನೆ ನೀಡಿದರು. ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಶುಭ ಕೋರಿದರು.

ಈ ವೇಳೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಕ್ರಿಕೆಟ್ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೇ, ಗ್ರಾಮೀಣ ಭಾಗದಲ್ಲಿಯೂ ಹೆಚ್ಚು ಜನಪ್ರಿಯತೆಗೊಳಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳು ಇದ್ದಾರೆ. ಅವರಿಗೆ ಸರಿಯಾಗಿ ವೇದಿಕೆ ಸಿಗುತ್ತಿಲ್ಲ. ಇಂತಹ ಪಂದ್ಯಾವಳಿಗಳನ್ನು ನಡೆಸುವ ಮೂಲಕ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಶಾಸಕರ ಆಪ್ತ ಸಹಾಯಕ ಮಲ್ಲಗೌಡ ಪಾಟೀಲ, ಸತೀಶ್ ಪಾಟೀಲ, ಮೋಹನ್ ನಾಥಬಾ, ಸುಜಾತಾ ಜಟಾರ್, ಹಾಲಪ್ಪ ನಾಯಕ, ಕಮೀಟಿ ಅಧ್ಯಕ್ಷರು, ಗ್ರಾಪಂ ನೂತನ ಸದಸ್ಯರು ಸೇರಿದಂತೆ ಇತರರು ಇದ್ದರು.

Tags:

error: Content is protected !!