Belagavi

ಕ್ಯಾಂಟೋನ್ಮೆಂಟ್ ಬೋರ್ಡ್ ಇ ಛಾವಣಿ ಪೋರ್ಟಲ್ ಸೇವೆಗೆ ಚಾಲನೆ ನೀಡಿದ ಸಿಇಒ ಬರ್ಚಸ್ವಾ

Share

ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ಆಡಳಿತ ವ್ಯವಸ್ಥೆ ಡಿಜಲೀಕರಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಟೋನ್ಮೆಂಟ್ ಪ್ರದೇಶದ ನಿವಾಸಿಗಳ ಅನುಕೂಲಕ್ಕಾಗಿ ಆರಂಭಿಸಲಾಗಿರುವ ಇ ಛಾವಣಿ ಪೋರ್ಟಲ್ ಸೇವೆಯನ್ನು ಕ್ಯಾಂಟೋನ್ಮೆಂಟ್ ಬೋರ್ಡ್‍ನ ಕಾರ್ಯನಿರ್ವಾಹಕ ಅಧಿಕಾರಿ ಬರ್ಚಸ್ವಾ ಲೋಕಾರ್ಪಣೆಗೊಳಿಸಿದರು.

ಬೆಳಗಾವಿ ಕ್ಯಾಂಟೋನ್ಮೆಂಟ್ ಪ್ರದೇಶದ ನಿವಾಸಿಗಳ ಅನುಕೂಲಕ್ಕಾಗಿ ಇ ಛಾವಣಿ ಪೋರ್ಟಲ್ ಸೇವೆಯನ್ನು ಆರಂಭಿಸಲಾಗಿದೆ. ತೆರಿಗೆ ಪಾವತಿ, ಅಹವಾಲು ಸಲ್ಲಿಕೆ, ಪರವಾನಗಿ ಪತ್ರ, ಗುತ್ತಿಗೆ ನವೀಕರಣಕ್ಕೆ ಅರ್ಜಿ, ವ್ಯವಹಾರಕ್ಕೆ ನೋಂದಣಿ ಹೀಗೆ ಹಲವು ಸೇವೆಗಳನ್ನು ಇ ಛಾವಣಿ ಪೋರ್ಟಲ್ ಮೂಲಕ ನೀಡಲು ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ಆಡಳಿತ ಸಜ್ಜುಗೊಂಡಿದೆ. ಇ ಛಾವಣಿ ಪೋರ್ಟಲ್ ಸೇವೆಯನ್ನು ಕ್ಯಾಂಟೋನ್ಮೆಂಟ್ ಬೋರ್ಡ್‍ನ ಕಾರ್ಯನಿರ್ವಾಹಕ ಅಧಿಕಾರಿ ಬರ್ಚಸ್ವಾ, ಬೋರ್ಡ್‍ನ ಸದಸ್ಯರು, ಪದಾಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ಲೋಕಾರ್ಪಣೆಗೊಳಿಸಿದರು. ಬಳಿಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಕರಪತ್ರಗಳನ್ನು ವಿತರಿಸಿದರು.

ಈ ವೇಳೆ ಕ್ಯಾಂಟೋನ್ಮೆಂಟ್ ಬೋರ್ಡ್ ಸಿಇಒ ಬರ್ಚಸ್ವಾ ಮಾತನಾಡಿ, ಪ್ರದೇಶದ ನಾಗರಿಕರಿಗೆ ತ್ವರಿತ ಸೇವೆ ನೀಡಲು ಇ ಛಾವಣಿ ಪೋರ್ಟಲ್ ಅನುಕೂಲವಾಗಲಿದೆ. ಆಡಳಿತ ಮಂಡಳಿ ಆಧುನಿಕತೆಗೆ ತಕ್ಕಂತೆ ಬದಲಾಗುತ್ತಿದ್ದು, ನಾಗರಿಕರು ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು. ಏನೇ ಮಾಹಿತಿ ಬೇಕಿದ್ದರೂ, ಸಮಸ್ಯೆ ಎದುರಾದರೂ ಆಡಳಿತ ಮಂಡಳಿ ಕಚೇರಿಯನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಈ ವೇಳೆ ಕ್ಯಾಂಟೋನ್ಮೆಂಟ್ ಬೋರ್ಡ್‍ನ ರಿಜ್ವಾನ್ ಬೇಪಾರಿ, ವಿಕ್ರಮ ಪುರೋಹಿತ, ಸಾಜಿದ್ ಶೇಖ್, ಅಲ್ಲಾವುದ್ದೀನ್ ಕಿಲ್ಲೇಕರ, ನಿರಂಜನಾ ಅಷ್ಟೇಕರ, ಅರೇಬಿಯಾ ಧಾರವಾಡಕರ ಮತ್ತಿತರರು ಇದ್ದರು.

Tags:

error: Content is protected !!