ಕೋವಿಡ್ 19 ಡ್ರೈ ರನ್ ವೇಳೆ ಯಾರೊಬ್ಬರೂ ಕೆಲಸಕ್ಕೆ ಗೈರಾಗಬಾರದು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಖಡಕ್ ವಾರ್ನಿಂಗ್ ನೀಡಿದರು.
ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಚುನಾವಣೆ ಕೆಲಸದಂತೆ ಪ್ರತಿಯೊಬ್ಬರು ಈ ಕೊರೋನಾ ವ್ಯಾಕ್ಸಿನೇಷನ್ ನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಡಿಸಿ ಹೇಳಿದರು.
ಇನ್ನೂ ಕೋವಿಡ್ 19 ಲಸಿಕೆ ಕುರಿತು ಟ್ರೈನಿಂಗ್ ನೀಡಲಾಗುವುದು. ಅದರಲ್ಲಿ ಯವಾ ತರಹ ಕೆಲಸ ನಿರ್ವಹಣೆ ಮಾಡಿ, ಕೊಟ್ಟಿರುವ ಟಾರ್ಗೆಟ್ ಪೂರ್ಣಗೊಳಿಸಲೇಬೇಕು ಎಂದರು.
ಅಲ್ಲದೇ, ಕೋವಿಡ್ ಲಸಿಕೆ ವೇಳೆ ಎಲ್ಲರು ಸರ್ಕಾರದ ರೂಲ್ಸ್ ಫಾಲೋ ಮಾಡ್ಲೇಬೇಕು. ಲಸಿಕೆ ಬಳಸುವ ಸಲುವಾಗಿ ಶಾಲೆಗಳು, ಸಮುದಾಯ ಭವನದ ಅವಶ್ಯಕತೆ ಇರುತ್ತದೆ. ವ್ಯಾಕ್ಸಿನೇಷನ್ ನಲ್ಲಿ ವೇಟಿಂಗ್ ಜಾಸ್ತಿಯಿರುವ ಸಂಭವ ಹಿನ್ನೆಲೆ ಸಾಕಷ್ಟು ತಯಾರಿ ಮಾಡಲಾಗುತ್ತಿದೆ. ಲಸಿಕೆ ಪಡೆದ ಬಳಿಕ ಇಬ್ಬರು ಸಿಬ್ಬಂದಿಗಳು ಅವರ ಮೇಲೆ ಅರ್ಧ ಗಂಟೆ ವರೆಗೂ ನಿಗಾ ಇಡಬೇಕಿದೆ ಎಂದರು. ಇನ್ನು ಲಸಿಕೆ ಹಂಚಿಕೆ ಬಗ್ಗೆ ಈಗಾಗಲೇ ಸರ್ಕಾರ ಗೈಡ್ ಲೈನ್ಸ್ ಗಳಂತೆ ವ್ಯವಸ್ಥೆ ಮಾಡಲಾಗುವುದು ಎಂದು ಡಿಸಿ ಸುನೀಲಕುಮಾರ ಮಾಹಿತಿ ನೀಡಿದರು…