Chikkodi

ಕೋವಿಡ್ ಲಸಿಕೆ ಉಚಿತವಾಗಿ ಕ್ಷೇತ್ರದ ಜನರಿಗೆ ನೀಡಲು ಸಿದ್ಧ : ಶಾಸಕ ಗಣೇಶ ಹುಕ್ಕೇರಿ

Share

ಒಂದು ವೇಳೆ ಸರ್ಕಾರ ಈ ಕೊವೀಡ್ ಲಸಿಕೆಗೆ ದರ ನಿಗಧಿ ಮಾಡಿದರೆ, ಕೇವಲ ಚಿಕ್ಕೊಡಿ-ಸದಲಗಾ ವಿಧಾನಸಭಾ ಕ್ಷೇತ್ರ ಅಷ್ಟೆ ಅಲ್ಲ, ಚಿಕ್ಕೊಡಿ ಲೋಕಸಭಾ ಕ್ಷೇತ್ರಕ್ಕೆ, ನಮ್ಮ ಫೌಂಡೆಶನ್ ವತಿಯಿಂದ ಉಚಿತವಾಗಿ ಲಸಿಕೆ ನೀಡಲು ಸಿದ್ಧ ಎಂದು ಚಿಕ್ಕೊಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಡ್ರೈ ರನ್ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯಾಧಿಕಾರಿಗಳು ಹಾಗೂ ವೈದ್ಯರ ಜೊತೆ ಮಾತುಕತೆ ನಡೆಸಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರದಲ್ಲಿ ಸಂಭವಿಸಿದ ಅತಿವೃಷ್ಠಿ, ಅನಾವೃಷ್ಟಿ ಹಾಗೂ ಲಾಕಡೌನ್ ಸಂದರ್ಭದಲ್ಲಿ, ಯಾವ ರೀತಿಯಾಗಿ ನಮ್ಮ ಫೌಂಡೆಶನ್ ಹಾಗೂ ನಮ್ಮ ಕುಟುಂಬದ ವತಿಯಿಂದ ನಾವು ಸಹಾಯ ಮಾಡಿದ್ದೇವೆ ಅದೇ ರೀತಿಯಾಗಿ ಮುಂದಿನ ದಿನಗಳಲ್ಲಿ ನಮ್ಮ ಸೇವೆ ಇರಲಿದೆ. ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೆ ಉಚಿತವಾಗಿ ಲಸಿಕೆ ತಲುಪಿಸುವ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಕುಟುಂಬ ಹಾಗೂ ನಮ್ಮ ಕಾರ್ಯಕರ್ತರು ಸೇರಿ ಮಾಡುತ್ತೇವೆ ಎಂದು ಶಾಸಕ ಗಣೇಶ್ ಹುಕ್ಕೇರಿ ಹೇಳಿದರು.

ಇಂದು ಯಕ್ಸಂಬಾ ಪಟ್ಟಣ್ಲದಲ್ಲಿ ಇಷ್ಟು ದೊಡ್ಡ ಪ್ರಮಾಣದ ಆರೋಗ್ಯ ಕೇಂದ್ರ ಸ್ಥಾಫನೆಗೆ ಮೂಲ ಕಾರಣ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ, ನಾನೂ ಜಿಲ್ಲಾ ಪಂಚಾಯತಿ ಸದಸ್ಯನಿದ್ದಾಗ ಸ್ಥಳಿಯ ಅಧಿಕಾರಿಗಳ ಜೊತೆ ನಿರಂತರ ಚರ್ಚೆ ಮಾಡಿ, ಇಂತಹ ದೊಡ್ಡ ಮಟ್ಟದ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಇನ್ನೂ ಅನೇಕ ಕಡೆ ಡ್ರೈ ರನ್ ಮಾಡುವುದಕ್ಕೆ ಸ್ಥಳಾವಕಾಶ ಇಲ್ಲದೆ ಇದ್ದಾಗ , ಜಿಲ್ಲಾಧಿಕಾರಿಗಳು ಹಾಗೂ ತಾಲೂಕಾಧಿಕಾರಿಗಳು ಸೇರಿ, ಸೂಕ್ತ ವ್ಯವಸ್ಥೆ ಮಾಡಲಿದ್ದೇವೆ ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದರು.

Tags:

error: Content is protected !!