ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಿಜ ಶರಣ ಅಂಬಿಗೇರ ಚೌಡಯ್ಯನವರ 901 ನ ಜಯಂತಿ ನಿಮಿತ್ತ ಅಂಬಿಗರ ಚೌಡಯ್ಯನವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ 901 ನ ಜಯಂತಿ ನಿಮಿತ್ತ ಅಂಬಿಗರ ಚೌಡಯ್ಯನವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಮರಡಿಮಠದ ಪವಾಡೇಶ್ವರ ಸ್ವಾಮೀಜಿ ಮತ್ತು ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ನೆರವೇರಿಸಿದರು. ನೂರಾರು ಸುಮಂಗಲಿಯರು ಕುಂಭ ಮೇಳದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿ ಇರುವ ಸ್ಥಳಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಕೊಣ್ಣೂರಿನ ಗಂಗಾಮಾತಾ ಸಮಾಜದವರಿಂದ ಕಾರ್ಮಿಕ ದುರಿಣ ಅಂಬಿರಾವ ಪಾಟೀಲ ಮತ್ತು ವೇದಿಕೆ ಮೇಲೆ ಆಸೀನರಾದ ಗಣ್ಯವ್ಯಕ್ತಿಗಳಿಗೆ ಸನ್ಮಾನಿಸಲಾಯಿತು.
ಈ ವೇಳೆ ಅಂಬಿರಾವ್ ಪಾಟೀಲ ಮಾತನಾಡಿ, ಗಂಗಾಮತ ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯವಾಗಿದೆ. ಅಂಬಿಗರ ಚೌಡಯ್ಯನವರನ್ನು ಗುರುವಾಗಿ ಇರಿಸಿಕೊಂಡು ಸಮಾಜ ಒಂದಾಗುತ್ತಿರುವುದು ಸಂತಸ ನೀಡಿದೆ ಎಂದರು.
ಈ ವೇಳೆ ಗಂಗಾ ಮಾತಾ ಸಮಾಜದ ಜಿಲ್ಲಾ ಅಧ್ಯಕ್ಷ ಶೆಟ್ಟೆಪ್ಪಾ ತಳವಾರ ಮಾತನಾಡಿ, ಸಮಾಜವನ್ನು ಒಂದಾಗಿಸಲು ಇಂತಹ ಕಾರ್ಯಕ್ರಮಗಳನ್ನು ಮಾಡುವುದು ಅವಶ್ಯವಾಗಿದೆ. ಮೂರ್ತಿ ಪ್ರತಿಷ್ಠಾಪನೆಯಿಂದ ನಮ್ಮ ಮೂಲ ಪುರುಷರಾದ ಶರಣರ ಬಗ್ಗೆ ತಿಳಿವಳಿಕೆ ಬರುತ್ತದೆ ಎಂದರು.
ಈ ವೇಳೆ ಸ್ಥಳೀಯ ಮುಖಂಡರಾದ ಪ್ರಕಾಶ ಕರನಿಂಗ, ನಂದಾ ಗಣಾಚಾರಿ,ವಿನೋದ ಕರನಿಂಗ, ಅಶೋಕ ಕೋಳಿ, ಕೊಣ್ಣೂರು ಪುರಸಭೆಯ ಮುಖ್ಯಾಧಿಕಾರಿಗಳು, ಅಧ್ಯಕ್ಷ, ಉಪಾಧ್ಯಕ್ಷರು, , ಸದಸ್ಯರು ಹಾಗೂ ಗಂಗಾ ಮಾತಾ ಸಮಾಜದ ಮುಖಂಡರು ನೂರಾರು ಯುವಕರು, ಮಹಿಳೆಯರು ಉಪಸ್ಥಿತರಿದ್ದರು.