Belagavi

ಕೈ ಬೆಳಿಗ್ಗೆ ತೊಳೆದುಕೊಳ್ಳಲು ಮಾತ್ರ ಉಪಯೋಗಿಸಬೇಕು…ಕಾಂಗ್ರೆಸ್ ವಿರುದ್ಧ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ..!

Share

ಬಿಜೆಪಿಯಯಲ್ಲಿ ಮುಂದೆ ಯಾರು ಅಧ್ಯಕ್ಷ ಆಗ್ತಾರೆ ಅನ್ನೋದು ಗೊತ್ತಾಗೋದಿಲ್ಲ. ಆದ್ರ ಕಾಂಗ್ರೆಸ್‍ನಲ್ಲಿ ಮುಂದೆ ಅಧ್ಯಕ್ಷ ಯಾರು ಆಗ್ತಾರೆ ಅನ್ನೋದು ಗೊತ್ತಾಗುತ್ತದೆ. ಸೋನಿಯಾ ಮಾಮಿ, ರಾಹುಲ್ ಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಮಾಮಿ ಅಂತಾ ಅಷ್ಟರಲ್ಲೇ ಕಾಂಗ್ರೆಸ್ ಗಾಡಿ ಓಡಾಡುತ್ತದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ್ ಟಾಂಗ್ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಚಲೋ ಗಣೇಶ್ ಬಾಗ್ ಹೆಸರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ಸನ್ಮಾನ, ಸ್ನೇಹ ಭೋಜನದಲ್ಲಿ ಮಾಜಿ ಶಾಸಕ ಸಂಜೆಯ ಪಾಟೀಲ್ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಮುಂದೆ ಎಲ್ಲಿ ನೋಡಿದ್ರೂ ಕಮಲ ಅರಳಬೇಕು. ಮುಂದಿನ ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಕಮಲ ಆರಳಬೇಕು. ಬೈಲಹೊಂಗಲ, ಖಾನಾಪೂರ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಮಲ ಅರಳಬೇಕು ಎಂದರು. ಇನ್ನು ಕೈಯನ್ನ ಬೆಳಗ್ಗೆ ಮಾತ್ರ ತೊಳೆದುಕೊಳ್ಳಲು ಉಪಯೋಗ ಮಾಡಬೇಕು ಎಂದು ಕಾಂಗ್ರೆಸ್‍ಗೆ ಟಾಂಗ್ ನೀಡಿದ ಸಂಜಯ ಪಾಟೀಲ್, ಬಿಜೆಪಿಯಯಲ್ಲಿ ಮುಂದೆ ಯಾರು ಅಧ್ಯಕ್ಷ ಆಗ್ತರೆ ಅನ್ನೋದು ಗೊತ್ತಾಗೋದಿಲ್ಲ. ಸಾಮಾನ್ಯ ಕಾರ್ಯಕರ್ತರ ಕೂಡ ಉನ್ನತ ಹುದ್ದೆಯಲ್ಲಿ ಇರ್ತಾರೆ. ಆದ್ರ ಕಾಂಗ್ರೆಸ್ ನಲ್ಲಿ ಮುಂದೆ ಅಧ್ಯಕ್ಷ ಯಾರು ಆಗ್ತಾರೆ ಅನ್ನೋದು ಗೊತ್ತಾಗುತ್ತದೆ. ಸೋನಿಯಾ ಮಾಮಿ, ರಾಹುಲ್ ಗಾಂಧಿ, ಆಮೇಲೆ ರಾಹುಲ್ ಗಾಂಧಿ, ಸೋನಿಯಾ ಮಾಮಿ ಅಂತಾ ಅಷ್ಟರಲ್ಲೇ ಕಾಂಗ್ರೆಸ್ ಗಾಡಿ ಓಡಾಡುತ್ತದೆ ಎಂದು ಟಾಂಗ್ ನೀಡಿದರು.
ಒಟ್ಟಿನಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ಸಂಜಯ ಪಾಟೀಲ ಟೀಕೆ ಕಾರ್ಯಕ್ರಮದಲ್ಲಿ ನಗೆಯ ಹೊನಲು ಹರಿಸಿತು.

Tags:

error: Content is protected !!