Khanapur

ಕೇವಲ 90 ದಿನಗಳಲ್ಲಿ ಲೋಂಡಾ ರೈಲ್ವೇ ಅಂಡರ್ ಬ್ರಿಡ್ಜ್ ಕಾಮಗಾರಿ ಪೂರ್ಣ

Share

ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಲೋಂಡಾ ರೈಲ್ವೇ ಜಂಕ್ಷನ್‍ನಲ್ಲಿ ರೋಡ್ ಅಂಡರ್ ಬ್ರಿಡ್ಜ್ ಉದ್ಘಾಟನಾ ಸಮಾರಂಭ ಜರುಗಿತು.

ಖಾನಾಪೂರ ತಾಲೂಕಿನ ಲೋಂಡಾ ರೈಲ್ವೇ ಜಂಕ್ಷನ್ ಬಳಿಯ ರೋಡ್ ಅಂಡರ್ ಬ್ರಿಡ್ಜ್‍ನ್ನು ಸೋಮವಾರ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು. ಹುಬ್ಬಳ್ಳಿ ವಿಭಾಗದ ಮಹಾ ಪ್ರಬಂಧಕ ಅಜಯ್ ಕುಮಾರ್ ಸಿಂಗ್ ಹಾಗೂ ಪ್ರಿನ್ಸಿಪಾಲ್ ಚೀಫ್ ಸೆಕ್ರೆಟರಿ ಆಫ್ ಸೌತ್ ವೆಸ್ಟರ್ನ್ ರೈಲ್ವೆಯ ವಿಪುಲ್ ಕುಮಾರ್ ಹಾಗೂ ಡಿಆರ್ ಎಂ ಅರವಿಂದ್ ಮಾಳಖೇಡೆ ಸೇರಿದಂತೆ ಭಾರತೀಯ ರೈಲ್ವೆ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಲೋಂಡಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಬಾಲಜಾಜ್ ಭಜಂತ್ರಿ ಮಾತನಾಡಿ, ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಈ ರೋಡ್ ಅಂಡರ್ ಬ್ರಿಡ್ಜ್ ಕಾಮಗಾರಿಯ ಕಾರ್ಯವೈಖರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರುತ್ತದೆ.ಏಕೆಂದರೆ ಕಡಿಮೆ ಯೆಂದರೂ ನಿರಂತರವಾಗಿ ಕೆಲಸ ಮಾಡಿದರೂ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತಿತ್ತು. ಆದರೆ ಕೇವಲ 90 ದಿನಗಳಲ್ಲಿ ರೋಡ್ ಅಂಡರ್ ಬ್ರಿಜ್ ತಯಾರಾಗಿದೆ ಎಂದರು.

ಒಟ್ಟಿನಲ್ಲಿ ಲೋಂಡಾ ರೈಲ್ವೇ ಜಂಕ್ಷನ್ ಬಳಿ ರೋಡ್ ಅಂಡರ್ ಬ್ರಿಡ್ಜ್ ಲೋಕಾರ್ಪಣೆಗೊಂಡು ಸಾರ್ವಜನಿಕರ ಸೇವೆಗೆ ಅಣಿಯಾಗಿದೆ.

Tags:

error: Content is protected !!