Vijaypura

ಕೆ.ಎಸ್.ಆರ್.ಪಿ, ಎಡಿಜಿಪಿ ಅಲೋಕಕುಮಾರ ಅವರ ನೇತೃತ್ವದಲ್ಲಿ ಗುಮ್ಮಟನಗರಿಯಲ್ಲಿ ರನ್ ಫಾರ್ ಫಿಟ್ ಇಂಡಿಯಾ ರ‌್ಯಾಲಿ

Share

ಕೊರೋನಾ ದಂತಹ ವಿವಿ ಕಾಯಿಲೆಗಳಿಂದ ಬಳಲುತ್ತಿರುವ ಜನರು ಸಾವಿಗೆ ಶರಣಾಗುತ್ತಿದ್ದಾರೆ, ಈ ಹಿನ್ನಲೆ ಮೊದಲು ತಮ್ಮ ದೇಹವನ್ನು ಗಟ್ಟಿಯಾಗಿ ಇಟ್ಟುಕೊಂಡರೆ ಯಾವುದೇ ಕಾಯಿಲೆಗಳು ಸಹಿತ ಬರುವದಿಲ್ಲ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕೆ.ಎಸ್.ಆರ್.ಪಿ ಎಡಿಜಿಪಿ ಅಲೋಕ್ ಕುಮಾರ ಅವರ ನೇತೃತ್ವದಲ್ಲಿ ರನ್ ಫಾರ್ ಫಿಟ್ ಇಂಡಿಯಾ ರ‌್ಯಾಲಿ ಇಂದು ವಿಜಯಪುರ ನಗರದಲ್ಲಿ ನಡೆಯಿತು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…

ಹೌದು ಇತ್ತೀಚಿನ‌ ದಿನಗಳಲ್ಲಿ ಹಲವು ಜನ ಕೊರೋನಾದಂತಹ ಕಾಯಿಲೆಗಳಿಗೆ ತುತ್ತಾಗಿ ಸಾವನಪ್ಪುತ್ತಿದ್ದಾರೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಎಂತಹ ಕಾಯಿಲೆಯನ್ನು ಸಹಿತ ಎದುರಿಸಬಹುದು, ಈ ಹಿನ್ನಲೆಯಲ್ಲಿ ಈ ಕುರಿತು ಜನರಿಗೆ ಮನವರಿಕೆ ಮಾಡಲು ಇಂದು ಕೆ.ಎಸ್.ಆರ್.ಪಿ ಎಡಿಜಿಪಿ ಅಲೋಕ ಕುಮಾರ ಅವರ ನೇತೃತ್ವದಲ್ಲಿ ರನ್ ಫಾರ್ ಫಿಟ್ ಇಂಡಿಯಾ ರ‌್ಯಾಲಿ ವಿಜಯಪುರ ನಗರದಲ್ಲಿ ನಡೆಯಿತು. ನಗರದ ಗೋಲ ಗುಮ್ಮಟದ ಆವರಣದಿಂದ‌ ಬಿ.ಎಲ್.ಡಿ.ಈ ಕ್ಯಾಂಪಸ್ ವರೆಗೆ ಅಂದರೆ ಐದು ಕಿಲೋ ಮಿಟರ್ ವರೆಗೆ ರ‌್ಯಾಲಿ ನಡೆಯಿತು…

: ಇನ್ನೂ ಈ ಐದು ಕಿಲೋ ಮಿಟರ್ ಓಟದಲ್ಲಿ ಹಲವು ಜನ ಸ್ಥಳಿಯರು, ಕ್ರೀಡಾ ಇಲಾಖೆಯ ಯುವಕರು, ಕರಾಟೆ ಅಸೋಸಿಯೇಷನ್ ನವರು, ವಾಲಿಬಾಲ್, ಪುಟ್ ಬಾಲ್‌ ಕ್ರೀಡಾಪಟುಗಳು, ಬಿ.ಎಲ್.ಡಿ.ಈ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿಂತೆ ಹಲವು ಜನರು ರನ್ ಫಾರ್ ಫಿಟ್ ಇಂಡಿಯಾ ಓಟದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಈ ಓಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಸಹಿತ ಸಂತಸ ವ್ಯಕ್ತ ಪಡಿಸುವದರ ಜೊತೆಗೆ ಸಾರ್ವಜನಿಕರು ಸಹಿತ ಪ್ರತಿದಿನ ವ್ಯಾಯಾಮ ಮಾಡುವದರಿಂದ ಆರೋಗ್ಯವಾಗಿರಬಹುದು ಇದನ್ನು ಎಲ್ಲರೂ ಮಾಡಬೇಕು ಎಂದು ಜಾಗೃತಿ ಮೂಡಿಸದರು…

ಇನ್ನೂ ಸಾರ್ವಜನಿಕರು ಸಹಿತ ತಮ್ಮ ರೋಗ ನಿರೋಧಕ ಶಕ್ತ ವೃದ್ದಿಸಿಕೊಳ್ಳಲು, ಪ್ರತಿ ದಿನ ವ್ಯಾಯಾಮ‌ ಯೋಗಾಸನವನ್ನು ಮಾಡಬೇಕಿದೆ. ಇಂದು ಕೆ.ಎಸ್.ಆರ್.ಪಿ ಬಟಾಲಿಯನ್ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯವೇ ಸರಿ…

Tags:

error: Content is protected !!