Belagavi

ಕೆಎಲ್‍ಇ ಕ್ಲಿನಿಕಲ್ ಸ್ಕಿಲ್ಸ ಲ್ಯಾಬ್ ಲೋಕಾರ್ಪಣೆಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

Share

ಬೆಳಗಾವಿ ಕೆಎಲ್‍ಇ ಆಸ್ಪತ್ರೆಯ ಅಡ್ವಾನ್ಸ ಸಿಮ್ಯೂಲೇಶನ್ ಸೆಂಟರ್ ಮತ್ತು ಕ್ಲಿನಿಕಲ್ ಸ್ಕಿಲ್ಸ ಲ್ಯಾಬ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಲೋಕಾರ್ಪಣೆಗೊಳಿಸಿದರು.ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬೆಳಗಾವಿಯ ಪ್ರತಿಷ್ಠಿತ ಜವಾಹರ್‍ಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ಕ್ಯಾಂಪನ್‍ನಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ಅಡ್ವಾನ್ಸ್ ಸಿಮ್ಯೂಲೇಶನ್ ಸೆಂಟರ್ ಮತ್ತು ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಜ್ಯೋತಿ ಬೆಳಗಿಸಿ, ರಿಬ್ಬನ್ ಕತ್ತರಿಸುವ ಮೂಲಕ ಭಾನುವಾರ ಮಧ್ಯಾಹ್ನ ಲೋಕಾರ್ಪಣೆಗೊಳಿಸಿದರು.

ತಾಯಿಯ ಭ್ರೂಣದ ಆರೈಕೆ, ನವಜಾತ ಶಿಶು ಆರೈಕೆ ಮತ್ತು ವಯಸ್ಕ ರೋಗಿಗಳ ಆರೈಕೆಗಾಗಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಇಂಟರ್ ವೆನಶನಲ್ ಅಲ್ಟ್ರಾಸೌಂಡ್ ತರಬೇತಿಗಾಗಿ ಸಿಮ್ಯೂಲೇಟರ್‍ಗಳನ್ನು ಹೊಂದಿದ ಲ್ಯಾಬ್ ಇದಾಗಿದೆ ಎಂದು ಕೆಎಲ್‍ಇ ವೈದ್ಯರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಈ ವೇಳೆ ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಕೆಎಲ್‍ಇ ಆಸ್ಪತ್ರೆಯ ಅಡ್ವಾನ್ಸ್ ಸಿಮ್ಯೂಲೇಶನ್ ಸೆಂಟರ್ ಮತ್ತು ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್ ಅತ್ಯಾಧುನಿಕ ಬಹುವೃತ್ತಿಪರ ತರಬೇತಿ ಸೌಲಭ್ಯವಾಗಿದೆ. ಅತ್ಯಾಧುನಿಕ ವೈದ್ಯಕೀಯ ಸಿಮ್ಯೂಲೇಟರ್‍ಗಳು ಮತ್ತು ಕೌಶಲ್ಯ ತರಬೇತಿ ನೀಡುವ ಕೇಂದ್ರವಾಗಿದೆ ಎಂದು ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು.
ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕೆಎಲ್‍ಇ ಅಧ್ಯಕ್ಷ ಮಹಾಂತೇಶ ಕೌಜಲಗಿ, ಸಚಿವ ಜಗದೀಶ ಶೆಟ್ಟರ್, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಕೆಎಲ್‍ಇ ಆಸ್ಪತ್ರೆಗೆ ಭೇಟಿ ನೀಡಿ ಪ್ರಯೋಗಾಲಯ, ತರಬೇತಿ ಕೇಂದ್ರವನ್ನು ಗೃಹ ಸಚಿವ ಅಮೀತ್ ಶಾ ಉದ್ಘಾಟಿಸಿದ್ದು ಗಮನ ಸೆಳೆಯಿತು.

 

 

Tags:

error: Content is protected !!