ಕರ್ನಾಟಕ ರಾಜ್ಯ ಸಹಕಾರ ಕೃಷಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕಿನ ರಾಜ್ಯ ಉಪಾಧ್ಯಕ್ಷರಾಗಿ ಮಹಾಂತೇಶ ಮಮದಾಪೂರ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಉದ್ಯಮಿ ಸುನೀಲ್ ಹಂಜಿ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಕೃಷಿ ಪ್ರಧಾನ ಖಾನಾಪುರ ತಾಲೂಕಿನ ಅಭಿವೃದ್ಧಿಗೆ ನೆರವು ನೀಡಬೇಕೆಂದು ಮನವಿ ಮಾಡಿದರು.
: ಮಾಜಿ ಶಾಸಕ, ಎನ್ ಆರ್ ಇ ಸಂಸ್ಥೆಯ ಸಂಸ್ಥಾಪಕ ಬಸಪ್ಪಣ್ಣಾ ಅರಗಾಂವಿ ಅವರ ಮೊಮ್ಮಗ ಮಹಾಂತೇಶ ಮಮದಾಪೂರ ಈಗ ಕರ್ನಾಟಕ ರಾಜ್ಯ ಸಹಕಾರ ಕೃಷಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕಿನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖಾನಾಪುರ ತಾಲೂಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಮಹಾಂತೇಶ ಮಮದಾಪೂರ ಅವರಿಗೆ ಯುವ ಉದ್ಯಮಿ ಸುನೀಲ್ ಹಂಜಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಖಾನಾಪೂರ ತಾಲೂಕಾ ಕೃಷಿ ಪ್ರಾಧಾನ್ಯ ತಾಲೂಕುವಾಗಿದ್ದು, ಕೃಷಿ ಸಹಕಾರಿ ಕ್ಷೇತ್ರ ಹಾಗೂ ಭೂ ಅಭಿವೃದ್ಧಿ ಬ್ಯಾಂಕಿನ ವತಿಯಿಂದ ಖಾನಾಪೂರ ತಾಲೂಕಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಮಮದಾಪೂರ ಸ್ಪಂದಿಸಿದರು.