hubbali

ಕುರುಬರಿಗೆ ಸಚಿವ ಸ್ಥಾನ ನೀಡದಿದ್ದರೇ ಸರ್ಕಾರಕ್ಕೆ ತೊಂದರೆ..ಬಸವರಾಜ ದೇವರ ಭವಿಷ್ಯ

Share

ಹಿಂದಿನ ಮೂರು ಸರ್ಕಾರಕ್ಕೆ ಕುರುಬರ ಸಹಕಾರ ಇತ್ತು.ಈಗ ಕೂಡ ಬಿಜೆಪಿ ಸರ್ಕಾರವನ್ನು ಗಟ್ಟಿಗೊಳಿಸಲು ಕುರುಬರೇ ಕಾರಣ.ಸಚಿವ ಸಂಪುಟದಲ್ಲಿ ಮೂವರು ಕುರುಬ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಧಾರವಾಡ ಜಿಲ್ಲೆಯ ಮನಸೂರು ಮಠದ ಬಸವರಾಜ್ ದೇವರು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಡಿದ ಸ್ವಾಮೀಜಿ ಟೀಕೆಗಳಿಗೆ ಒಳಗಾಗಿ ಸರ್ಕಾರ ತಂದವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸುತ್ತೇನೆ.ಸರ್ಕಾರ ರಚನೆಯಲ್ಲಿ ಕುರುಬ ಶಾಸಕರ ಸಹಕಾರ ಮಹತ್ವದ್ದಾಗಿದೆ.ಎಂ.ಟಿ.ಬಿ ನಾಗರಾಜ್ ಸಚಿವ ಸ್ಥಾನ ತ್ಯಾಗ ಮಾಡಿ ಪಕ್ಷ ಸೇರಿದ್ದಾರೆ.ಅಲ್ಲದೇ ಎಚ್.ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರಿದ್ದವರು ಹಾಗೂ ಇನ್ನು ಆರ್. ಶಂಕರ್ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಇವರಿಗೆ ಸಚಿವ ಸ್ಥಾನ ಕೊಡದೇ ಇದ್ದರೆ, ಸರ್ಕಾರಕ್ಕೆ ತೊಂದರೆ ಆಗುತ್ತದೆ ಎಂದು ಅವರು ಭವಿಷ್ಯ ನುಡಿದರು.

ಸಿದ್ದರಾಮಯ್ಯ ಅವರಿಗೆ ಕುರುಬರು ಬೆಂಬಲಿಸಿದ್ದಕ್ಕೆ ಸರ್ಕಾರ ಬಂತು.ಹೆಚ್‍ಡಿ ಕುಮಾರಸ್ವಾಮಿ ಸರ್ಕಾರ ಬರಲು ಕುರಬರೇ ಕಾರಣ.ಇದೀಗ ಬಿಜೆಪಿ ಸರ್ಕಾರಕ್ಕೆ ಬಹುಮತ ಇರಲಿಲ್ಲ.ನಮ್ಮ ನಾಯಕರು ಹೋಗಿ ಸರ್ಕಾರ ಗಟ್ಟಿಗೊಳಿಸಿದ್ದಾರೆ ಎಂದರು. ಈ ವೇಳೆ ಕುರುಬ ಸಮುದಾಯದ ಹಲವು ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!