ಔಷಧ ಮಾರಾಟ ಕ್ಷೇತ್ರದಲ್ಲಿ ಕಾರ್ಪೋರೆಟ್ ಕಂಪನಿಗಳಿಗೆ ಬೇಕಾಬಿಟ್ಟಿ ಪರವಾನಗಿ ನೀಡಿರುವುದರಿಂದ ಚಿಲ್ಲರೆ ಔಷಧ ವ್ಯಾಪಾರಿಗಳಿಗೆ ಸಾಕಷ್ಟು ಹಾನಿಯಾಗಿದ್ದು, ಕೂಡಲೇ ಕಾರ್ಪೋರೆಟ್ ಕಂಪನಿಗಳಿಗೆ ಅನುಮತಿ ನೀಡುವುದನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ರಿಟೇಲ್ ಫಾರ್ಮಸಿ ಅಸೋಸಿಯೇಷನ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಔಷಧ ಮಾರಾಟ ಕ್ಷೇತ್ರದಲ್ಲಿ ಕಾರ್ಪೋರೆಟ್ ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದರಿಂದ ಅಪೋಲೋ, ಮೆಡಿಪ್ಲಸ್, ನೆಟ್‍ಮೆಡ್, ವೆಲ್‍ನೆಸ್ ಫಾರ್ ಎವರ್‍ನಂತಹ ಕಂಪನಿಗಳು ಬೆಳಗಾವಿ ಜಿಲ್ಲೆಯ ವಿವಿಧೆಡೆ ಔಷಧಿ ಮಳಿಗೆಗಳನ್ನು ತೆರೆದಿವೆ. ಜೊತೆಗೆ ತಮ್ಮದೇ ಬ್ರ್ಯಾಂಡ್‍ನಲ್ಲಿ ಔಷಧಿಗಳನ್ನು ಮಾರಾಟ ಮಾಡುತ್ತಿವೆ. ಗ್ರಾಹಕರಿಗೆ ಶೇ.15ರಿಂದ 25ರಷ್ಟು ರಿಯಾಯಿತಿ ದರದಲ್ಲಿ ಔಷಧ ಮಾರಾಟ ಮಾಡಲಾಗುತ್ತಿದೆ. ಆದರೆ ಚಿಲ್ಲರೆ ಔಷಧ ಮಾರಾಟಗಾರರಿಗೆ ಕಂಪನಿಯಿಂದ ಸಿಗುತ್ತಿರುವ ಲಾಭಾಂಶ ಕಡಿಮೆಯಿದ್ದು, ಕಾರ್ಪೋರೆಟ್ ಕಂಪನಿಗಳಿಂದ ಚಿಲ್ಲರೆ ಔಷಧ ವ್ಯಾಪಾರ ವಹಿವಾಟಿಗೆ ಭಾರಿ ಹಾನಿಯಾಗುತ್ತಿದೆ. ಇದನ್ನು ತಪ್ಪಿಸಲು ಕಾರ್ಪೋರೆಟ್ ಕಂಪನಿಗಳಿಗೆ ಔಷಧ ಮಾರಾಟ ಮಾಡುವುದರ ಮೇಲೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ರಿಟೇಲ್ ಫಾರ್ಮಸಿ ಅಸೋಸಿಯೇಷನ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನ್ಯಾಯ ಬೇಕೆಂದು ಘೋಷಣೆ ಮೊಳಗಿಸಿದರು.
ಈ ವೇಳೆ ಬೆಳಗಾವಿ ಜಿಲ್ಲಾ ರಿಟೇಲ್ ಫಾರ್ಮಸಿ ಅಸೋಸಿಯೇಷನ್ ಅಧ್ಯಕ್ಷ ಜಯವಂತ ಸಾಳುಂಕೆ ಮಾತನಾಡಿ, ಕಾರ್ಪೋರೆಟ್ ಕಂಪನಿಗಳು ತಮ್ಮ ಬ್ರ್ಯಾಂಡ್‍ನಲ್ಲಿ ಔಷಧಿಗಳನ್ನು ಮಾರಾಟ ಮಾಡುತ್ತಿವೆ. ಗ್ರಾಹಕರಿಗೆ ಶೇ.15ರಿಂದ 25ರಷ್ಟು ರಿಯಾಯಿತಿ ದರದಲ್ಲಿ ಔಷಧ ಮಾರಾಟ ಮಾಡಲಾಗುತ್ತಿದೆ. ಆದರೆ ಚಿಲ್ಲರೆ ಔಷಧ ಮಾರಾಟಗಾರರಿಗೆ ಕಂಪನಿಯಿಂದ ಸಿಗುತ್ತಿರುವ ಲಾಭಾಂಶ ಕಡಿಮೆಯಿದ್ದು, ಕಾರ್ಪೋರೆಟ್ ಕಂಪನಿಗಳಿಂದ ಚಿಲ್ಲರೆ ಔಷಧ ವ್ಯಾಪಾರ ವಹಿವಾಟಿಗೆ ಭಾರಿ ಹಾನಿಯಾಗುತ್ತಿದೆ. ಡಾಕ್ಟರ್‍ಗಳೂ ಸಹ ಸ್ವತ: ಔಷಧ ಮಾರಾಟಕ್ಕೂ ಮುಂದಾಗಿರುವುದರಿಂದ ಚಿಲ್ಲರೆ ಔಷಧ ಮಳಿಗೆಗಳು ಮುಚ್ಚುತ್ತಿವೆ. ಕೂಡಲೇ ಸರ್ಕಾರ ಕಾರ್ಪೋರೆಟ್ ಕಂಪನಿಗಳ ಔಷಧ ಮಾರಾಟದ ಮೇಲೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ರಿಟೇಲ್ ಫಾರ್ಮಸಿ ಅಸೋಸಿಯೇಷನ್ ಕಾರ್ಯದರ್ಶಿ ಬಂಡು ಸದಲಗೆ ಮಾತನಾಡಿ, ಪಾರಂಪರಿಕ ಔಷಧ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ನೌಕರರು ಮನೆ ಸೇರುತ್ತಿದ್ದಾರೆ. ಕೂಡಲೇ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು. ಚಿಲ್ಲರೆ ಔಷಧ ಮಾರಾಟಗಾರರನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ರಿಟೇಲ್ ಫಾರ್ಮಸಿ ಅಸೋಸಿಯೇಷನ್‍ನ ಸಿದ್ದಣ್ಣ ಮುನವಳ್ಳಿ, ಭರತ್ ಕುಪ್ಪಾನಟ್ಟೆ, ವಿಕ್ರಾಂತ್ ಶಾನಭಾಗ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.