Kagawad

ಕಾಗವಾಡ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ “ರಾಷ್ಟ್ರೀಯ ಪತ್ರಿಕಾ ದಿನಾಚರಣೆ

Share

ಸಮಾಜದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮೂರನ್ನು ಹೊರತುಪಡಿಸಿ ಇನ್ನೊಂದು ಪತ್ರಿಕಾ ಅಂಗ ಸಮಾಜದಲ್ಲಿಯ ಸ್ವಾಸ್ಥವನ್ನು ಕಾಪಾಡುವ 4ನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಜವಾಬ್ದಾರಿ ಅತಿದೊಡ್ಡದಾಗಿದೆ. ಇಂದಿನ ಯುವಕರು ಪತ್ರಿಕಾ ಉದ್ಯಮದಲ್ಲಿ ಕಾಲಿಟ್ಟಿದ್ದು, ಸಮಾಜದಲ್ಲಿಯ ಸಮಸ್ಯೆಗಳು ಹೊರತಂದು ಅವುಗಳಿಗೆ ನ್ಯಾಯವದಿಗಿಸಲು ಮುಂದಾಗಬೇಕೆಂದು ಕಾಗವಾಡ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ ಹೇಳಿದರು.

ಬುಧವಾರ ರಂದು ಕಾಗವಾಡದ ಪ್ರವಾಸಿ ಮಂದಿರದಲ್ಲಿ ಕಾಗವಾಡ ತಾಲೂಕಿನ ಪತ್ರಕರ್ತರಿಂದ “ರಾಷ್ಟ್ರೀಯ ಪತ್ರೀಕಾ ದಿನಾಚರಣೆ” ಆಚರಿಸಿದರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ ಪ್ರಮಿಳಾ ದೇಶಪಾಂಡೆ ಸಮಾರಂಭದಲ್ಲಿ ಪಾಲ್ಗೊಂಡು ಮರಾಠಿ ಪತ್ರಿಕೆ ಜನಕ ಬಾಳಶಾಸ್ತ್ರೀ ಜಾಂಬೆಕರ ಇವರ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು.

ಕಳೇದ 9 ತಿಂಗಳಗಳಿಂದ ಇಡೀ ವಿಶ್ವದಲ್ಲಿ ಕೊರೋನಾ ಮಹಾಮಾರಿ ಎಲ್ಲರ ಜೀವನದ ಅಸ್ಥ-ವ್ಯಸ್ಥ ಮಾಡಿದೆ. ಇಂತಹ ಕಠೀನ ಸಮಯದಲ್ಲಿ ಪತ್ರಕರ್ತರು ಕೊರೋನಾ ಮಹಾಮಾರಿಯಲ್ಲಿ ಸರಕಾರಿ ಆಡಳಿತಕ್ಕೆ ಸಹಕರಿಸಿದೆ. ಈ ಮುಂದೆಯೂ ಇದೇ ರೀತಿ ಸಹಕಾರ ನೀಡಿರಿ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಸುಕುಮಾರ ಬನ್ನೂರೆ ಇವರು ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತರು ನೀಡುತ್ತಿರುವ ಸೇವೆ ಅಪಾರವಿದೆ. ಅವರ ಸಮಸ್ಯೆಗಳೂ ಅಪಾರಯಿವೆ. ಇದರಲ್ಲಿಯೂ ಪತ್ರಕರ್ತರು ಸಮಾಜದ ಸಮಸ್ಯೆಗಳು, ಅಂಕು-ಡೊಂಕುಗಳನ್ನು ತಿದ್ದುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಸರಕಾರಿ ಅಧಿಕಾರಿಗಳೂ ಸಹಕಾರ ನೀಡಬೇಕೆಂದರು.

ಹಿರಿಯ ಪತ್ರಕರ್ತರಾದ ಸಿದ್ದಯ್ಯಾ ಹಿರೇಮಠ, ಸುರೇಶ ಕಾಗಲಿ, ಕುಮಾರ ಪಾಟೀಲ, ಲಕ್ಷ್ಮಣ ಸೂರ್ಯವಂಶಿ, ರಂಗನಾಥ ದೇಶಿಂಗಕರ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಕಾಗವಾಡ ಉಪತಹಸೀಲ್ದಾರ ಅಣ್ಣಾಸಾಹೇಬ ಕೋರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪತ್ರಕರ್ತರಿಗೆ ಶುಭ ಹಾರೈಸಿದರು.

ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಎಲ್ಲ ಪತ್ರಕರ್ತರಿಗೆ ಡೈರಿ ಹಾಗೂ ಪೇನ್ ವಿತರಿಸಿದರು.
ಈ ವೇಳೆ ಪತ್ರಕರ್ತರಾದ ರಾಜು ಇಂಗಳಗಾಂವೆ, ಮಹಾಂತೇಶ ಅರಿಕೇರಿ, ಗುರುರಾಜ ಮಡಿವಾಳರ, ಸಚೀನ ಮಾನೆ, ಸಂದೀಪ ಪರಾಂಜಪೆ, ರಾಜಕುಮಾರ ಚೋಳಕೆ, ಶಿವಾಜಿ ಪಾಟೀಲ, ಸೇರಿದಂತೆ ಅನೇಕರು ಇದ್ದರು.

Tags:

error: Content is protected !!