Events

ಕಾಗವಾಡದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

Share

12ನೇ ಶತಮಾನದ ಬಸವಣ್ಣನವರ ಸಮಕಾಲಿನ ಶರಣರಾದ ಅಂಬಿಗರ ಚೌಡಯ್ಯಾ ಇವರ 901ನೇ ಜಯಂತಿ ಕಾಗವಾಡ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ ಇವರ ಅಧ್ಯಕ್ಷತೆಯಲ್ಲಿ ಸದಲಗಾ ಗುರುದೇವಾಶ್ರಮದ ಡಾ. ಶ್ರದ್ಧಾನಂದ ಸ್ವಾಮೀಜಿ, ಕಾಡಯ್ಯಾ ಸ್ವಾಮೀಜಿ ಇವರ ಸಾನ್ನಿಧ್ಯದಲ್ಲಿ ಆಚರಿಸಲಾಯಿತು.

ಗುರುವಾರ ರಂದು ತಹಸೀಲ್ದಾರ ಕಚೇರಿಯಲ್ಲಿ ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ಗಂಗಾಮಾತಾ ಕೋಳಿ ಸಮಾಜ ಸಂಘಟನೆ ವತಿಯಿಂದ ಅಂಬಿಗರ ಚೌಡಯ್ಯಾ ಇವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ತಹಸೀಲ್ದಾರ ಪ್ರಮೀಳಾ ದೇಶಪಾಂಡೆ, ಡಾ. ಶ್ರದ್ಧಾನಂದ ಸ್ವಾಮೀಜಿ, ಕಾಡಯ್ಯಾ ಸ್ವಾಮೀಜಿ, ಉಪತಹಸೀಲ್ದಾರ ಅಣ್ಣಾಸಾಹೇಬ ಕೋರೆ, ಕೋಳಿ ಸಮಾಜದ ಅಧ್ಯಕ್ಷ ಭಗವಂತ ತಳವಾರ, ಸುರೇಶ ಕೋಳಿ ಇವರಿಂದ ಪ್ರತಿಮೆಗೆ ಪೂಜೆ ಸಲ್ಲಿಸಿ, ಸಮಾಜದಲ್ಲಿ ವಿಶೇಷ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನಿಸುವ ಸಮಾರಂಭ ನೆರವೇರಿತು.

ಡಾ. ಶ್ರದ್ಧಾನಂದ ಸ್ವಾಮೀಜಿ ಮಾತನಾಡಿ, ಪ್ರತಿದಿನ ಸಾವಿರಾರು ಜನರು ಜನ್ಮತಾಳುತ್ತಾರೆ, ಸಾವನ್ನಪ್ಪುತ್ತಾರೆ. ಆದರೆ, ಅವರ ನೆನಪುಯಿರುವುದಿಲ್ಲಾ. ಮನೆಯಲ್ಲಿಯ ಸದಸ್ಯರು ಕಳೆದುಕೊಂಡ 3 ವರ್ಷ ನಂತರ ಸ್ಮರಣದಲ್ಲಿರುವುದಿಲ್ಲಾ. ಆದರೆ, ತಮಗಾಗಿ ಬದುಕದೆ ಇನ್ನೊಬ್ಬರಿಗಾಗಿ ಬದುಕಿರುವ ನಿಜಶರಣ ಅಂಬಿಗರ ಚೌಡಯ್ಯಾ ಇವರ 901ನೇ ಜಯಂತಿ ನಾವು ಆಚರಿಸುತ್ತಿದ್ದೇವೆ. ಸಮಾಜದಲ್ಲಿ ಇವರು ಹಾಕಿಕೊಟ್ಟಿರುವ ಸನ್ಮಾರ್ಗ ಎಲ್ಲರಿಗೆ ದಾರಿದೀಪವಾಗಿದೆ. ನಾವೆಲ್ಲರೂ ಸ್ವಾರ್ಥಕ್ಕಾಗಿ ಬದುಕದೆ ಇನ್ನೊಬ್ಬರಿಗೆ ಪರೋಪಕಾರ ಮಾಡೋಣ ಎಂಬ ಸಂದೇಶ ನೀಡಿದರು.

ಕಾಡಯ್ಯಾ ಸ್ವಾಮೀಜಿ ಮಾತನಾಡುವಾಗ, ಇಂದಿನ ಸಮಾಜದಲ್ಲಿ ಪತಿ-ಪತ್ನಿಯರಲ್ಲಿ ಸಂಬಂಧ ಇಲ್ಲದಂತಾಗಿದೆ. ಇಂಥಹ ಕಾಲದಲ್ಲಿ ಎಲ್ಲರನ್ನು ಒಗ್ಗೂಡಿಸವ ಶಕ್ತಿ, ಸಾಮಥ್ರ್ಯ ಯಾರಲ್ಲಿ ಇತ್ತು ಅಂದರೆ, ನಿಜಶರಣ ಅಂಬಿಗರ ಚೌಡಯ್ಯಾರಲ್ಲಿತ್ತು. ನಾವು ಇನ್ನೊಬ್ಬರಿಗಾಗಿ ಜಮೀನ, ಆಸ್ತಿ ಗಳಿಸುತ್ತೇವೆ. ಈ ಸಂಪತ್ತವನ್ನು ನಾವು ತೀರಿಕೊಂಡು ಹೋದ 3 ದಿನದಲ್ಲಿ ಯಾರೂ ಸ್ಮರಣದಲ್ಲಿರುವುದಿಲ್ಲಾ. ಆದರೆ, ನಿಜಶರಣರು ಹೇಗೆ ಬಂದರು ಹಾಗೇ ಹೋದರು. ಮಧ್ಯದಲ್ಲಿ ಸಮಾಜವನ್ನು ಒಗ್ಗೂಡಿಸಿ 300 ವಚನಗಳು ರಚಿಸಿ ಜೀವಂತವಾಗಿದ್ದ ಸಂಪತ್ತು ನಮಗೆ ನೀಡಿದ್ದಾರೆ ಎಂದು ಹೇಳಿದರು.

ಕಾಗವಾಡ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ, ನಿಜಶರಣ ಅಂಬಿಗರ ಚೌಡಯ್ಯಾ ಇವರ ಧಿಟ್ಟತನ ನನಗೆ ಪ್ರೇರಣಾದಾಯಿವಾಗಿದೆ. ನಾನು ಕಾಗವಾಡ ತಾಲೂಕಿನಲ್ಲಿ ಧಿಟ್ಟಾಗಿ ಉಳಿದು ಒಳ್ಳೆ ಆಡಳಿತ ನೀಡುತ್ತೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಸಮಾಜದ ಕಾಗವಾಡ ತಾಲೂಕಾಧ್ಯಕ್ಷ ಭಗವಂತ ತಳವಾರ, ಉಪಾಧ್ಯಕ್ಷ ಮಾರುತಿ ಸನದಿ, ಸುರೇಶ ಕೋಳಿ, ಶೈಲಜಾ ಕೋಳಿ, ನಿವೃತ್ತ ಅಧಿಕಾರಿ ಎಸ್.ಕೆ.ಹೊಳ್ಳಪ್ಪನ್ನವರ, ದುಂಡಪ್ಪಾ ಚಾಳೆಕರ, ಅಥಣಿ ತಾಲೂಕಾಧ್ಯಕ್ಷ ಹಣಮಂತ ಕಾಲವೆ, ಉಪಾಧ್ಯಕ್ಷ ಸಂಜಯ ತಳವಾರ, ತಮ್ಮಣ್ಣಾ ಮೆಸ್ತ್ರೀ, ಬಾಪು ಗಸ್ತಿ, ತಹಸೀಲ್ದಾರ ಕಚೇರಿಯ ಉಪತಹಸೀಲ್ದಾರ ಅಣ್ಣಾಸಾಹೇಬ ಕೋರೆ, ಬಸವರಾಜ ಬೋರಗಲ, ಎಂ.ಆರ್.ಪಾಟೀಲ, ಸೇರಿದಂತೆ ಅನೇಕರು ಇದ್ದರು. ಮಹಾದೇವ ಭಜನಿ ಮಂಡಳ ಸದಸ್ಯರು ಭಕ್ತಿಗೀತೆ ನುಡಿದರು.

Tags:

error: Content is protected !!