Chikkodi

ಕಾಂಗ್ರೆಸ್ ಕಾರ್ಯಕರ್ತರಿಂದ ಬ್ಲಾಕ ಅಧ್ಯಕ್ಷ ಅನೀಲ ಪಾಟೀಲಗೆ ಸತ್ಕಾರ

Share

ಗ್ರಾಮ ಪಂಚಾಯತ ಚುನಾವಣೆಯಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಜಯ ಗಳಿಸಿದ ಬೆನ್ನಲ್ಲಿಯೇ ಕಾಂಗ್ರೆಸ ಕಾರ್ಯಕರ್ತರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅನೀಲ ಪಾಟೀಲಯವರನ್ನು ಸತ್ಕರಿಸಿದರು.

ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ 26 ಗ್ರಾಮ ಪಂಚಾಯತ ಪೈಕಿ 18 ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಗೆಲವು ಸಾಧಿಸಿದ್ದಾರೆ. ಪಕ್ಷದ ಕಾರ್ಯಕರ್ತರ ಗೆಲುವಿಗೆ ಪ್ರಮುಖವಾದಂತಹ ಪಾತ್ರವನ್ನು ವಹಿಸಿದ ಹಾಗೂ ಚಂದೂರ ಗ್ರಾಮ ಪಂಚಾಯತ ಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ತರುವಲ್ಲಿ ಹಾಗೂ ಸತತ 20ವರ್ಷಗಳ ಕಾಲ ಚಂದೂರ ಗ್ರಾಮ ಪಂಚಾಯತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಚಿಕ್ಕೋಡಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ ಪಾಟೀಲಯವರನ್ನು ಯಡೂರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಗೌರವಯುತವಾಗಿ ಸತ್ಕರಿಸಿದರು.

ನಂತರ ಇನ್ ನ್ಯೂಸ ಜೊತೆ ಮಾತನಾಡಿದ ಅನೀಲ ಪಾಟೀಲಯವರು ಈ ಬಾರಿ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಶಾಸಕ ಗಣೇಶ ಹುಕ್ಕೇರಿಯವರು ಮಾಡಿದಂತಹ ಅಭಿವೃಧಿ ಕಾರ್ಯಗಳಿಂದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಹೆಚ್ಚಿನ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಹಾಗೂ ಚಂದೂರ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು ನಮಗೆ ಶ್ರೀರಕ್ಷೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯರಾದ ಪಾಂಡುರಂಗ ಕೋಳಿ, ಸುರೇಶ ಕಾಗವಾಡೆ, ಅನೀಲ ವಾಳಕೆ, ದಾದಾ ನರವಾಡೆ, ಶಂಕರ ಶೆಂಡೂರೆ, ಸಂತೋಷ ಗುರವ, ಮಲ್ಲಪ್ಪ ಕಮತೆ, ಸುಭೊದ ಜೋಶಿ, ರಮೇಶ ಒಂಟೆ, ತೇಜಗೌಡ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು…

Tags:

error: Content is protected !!