ತಡರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಬಂದು ರೈಲ್ವೇ ಸ್ಟೇಶನ್‍ನಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊರ್ವನಿಗೆ ನಾಲ್ವರು ಖದೀಮರು ಅಡ್ಡಗಟ್ಟಿ ಕಲ್ಲಿನಿಂದ ಜೋರಾಗಿ ಹೊಡೆದು ಮೂರ್ಛೆ ಬೀಳಿಸಿ ಅವರ ಬಳಿ ಇದ್ದ ಮೊಬೈಲ್ ದೋಚಿಕೊಂಡು ಹೋಗಿದ್ದ ಕೇಸ್‍ಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಖಡೇ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೌದು ಡಿ.31ರಂದು ತಡರಾತ್ರಿ 12 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದ ಬಸವಣಗಲ್ಲಿಯ ದೀಪಕ್ ನಾಯಕ್ ಎಂಬ ವ್ಯಕ್ತಿಯೂ ಯಾವುದೂ ಆಟೋ ಸಿಗದ ಹಿನ್ನೆಲೆ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನಾಲ್ವರು ಖದೀಮರು ಏಕಾಏಕಿ ಅಡ್ಡಗಟ್ಟಿ ಕಲ್ಲಿನಿಂದ ಹೊಡೆದು ಮೂರ್ಛೆ ಬೀಳಿಸಿ ಅವರ ಬಳಿಯಿದ್ದ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದರು. ಬಳಿಕ ಗಾಯಗೊಂಡ ದೀಪಕ್ ನಾಯಕ್ ನಗರದ ಕೆಎಲ್‍ಇ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಜ.3ರಂದು ಈ ಸಂಬಂಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೀಪಕ್ ನಾಯಕ್ ದೂರು ದಾಖಲಿಸಿದ್ದರು. ಪ್ರಕರಣದ ಜಾಡು ಹಿಡಿದು ತನಿಖೆ ಕೈಗೊಂಡಿದ್ದ ಖಡೇ ಬಜಾರ್ ಠಾಣೆ ಪೊಲೀಸರು ಸೋಮವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕ್ಯಾಂಪ್ ಪ್ರದೇಶದ ಓಂಕಾರ ಕಾಂಬಳೆ, ಗೌತಮ್ ಮಾನೆ, ಪ್ರವೀಣ ಉಪ್ಪಾರ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಂದು ಬೈಕ್, ಒಂದು ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ.ಇನ್ನೊರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದು. ತನಿಖೆ ಮುಂದುವರಿಸಿದ್ದೇವೆ.ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಂಕರ ಶಿಂಧೆ, ರಮೇಶ ಗಣಿ, ಉಜ್ಜಿನಕೊಪ್ಪ, ಅಂಬರೀಷ, ಕುಂಗಾರೆ, ಗೋಪಾಲ್ ಅಂಬಿ ಭಾಗಿಯಾಗಿದ್ದರು ಎಂದು ಖಡೇಬಜಾರ್ ಸಿಪಿಐ ಧೀರಜ್ ಶಿಂಧೆ ಅವರು ಇನ್‍ನ್ಯೂಸ್‍ಗೆ ದೂರವಾಣಿ ಮೂಲಕ ಹೆಚ್ಚಿನ ಮಾಹಿತಿ ನೀಡಿದ್ದಾರೆ.