Khanapur

ಕರಿಕಟ್ಟಿ ಗ್ರಾಮಕ್ಕೆ ಸುಮಾರು 2 ಕೋಟಿ 13ಲಕ್ಷದ ಕಾಮಗಾರಿಗೆ ಮಾಡಿದ್ದೆನೆ ಕೇವಲ ಎರಡು ವರ್ಷದಲ್ಲಿ :-ಶಾಸಕಿ ನಿಂಬಾಳ್ಕರ್

Share

ಹೌದು ಬರೀ ಕರಿಕಟ್ಟಿ ಗ್ರಾಮಕ್ಕೆ 2ಕೋಟಿ 13ಲಕ್ಷದ ಕಾಮಗಾರಿಯನ್ನು ಮಾಡಿಸಿಕೊಟ್ಟಿದೆನೆ.ಅದು ಕೂಡಾ ಎರಡು ವರ್ಷದಲ್ಲಿ ಎಂದು ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಹೇಳಿದರು.

ಅವರು ಖಾನಾಪೂರ ತಾಲೂಕಿನ ಕರಿಕಟ್ಟಿ ಗ್ರಾಮದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮದ ಮೂಲಕ ಸುಮಾರು 26ಜನರಿಗೆ ತಹಶೀಲ್ದಾರ್ ಅವರ ಮುಖಾಂತರ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಸಂದರ್ಭದಲ್ಲಿ ಹೇಳಿದರು.

ಅವರು ಮಾತನಾಡಿ ಯಾವುದೇ ಧರ್ಮ, ಜಾತಿ ಆ ಪಕ್ಷ ಈ ಪಕ್ಷ ಎಂಬ ಭೇದ ಭಾವ ಇಲ್ಲದೇ ಅಭಿವೃದ್ಧಿ ಪಡಿಸುವ ಕಾರ್ಯ ಮಾಡುತ್ತಿದೆನೆ ಏಕೆಂದರೆ ತಾವು ಶಾಸಕಿ ಅಂತ ಜವಾಬ್ದಾರಿಯನ್ನು ಕೊಟ್ಟಿದಿರಾ ಇದಕ್ಕೆ ಸಂಬಂಧಿಸಿದಂತೆ ಎಲ್ಲರನ್ನೂ ಸಮಾನವಾಗಿ ಕಂಡು ಅಭಿವೃದ್ಧಿ ಕಡೆಗೆ ಹೋಗುವುದಕ್ಕೆ ನನ್ನಗೆ ಸಂತೋಷವಿದೆ ಎಂದರು

.ಈ ಸಂದರ್ಭದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ತಾಹಶೀಲ್ದಾರ ರೇಷ್ಮಾ ತಾಳಿಕೋಟಿ ಸೇರಿದಂತೆ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಬಹುಸಂಖ್ಯೆಯಲ್ಲಿ ಕರಿಕಟ್ಟಿ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Tags:

error: Content is protected !!