ಸದ್ಯ ಚಿಕ್ಕೋಡಿ ಭಾಗದಲ್ಲಿ ಕಬ್ಬು ಕಟಾವಿನ ಹಂಗಾಮ ಭರದಿಂದ ಸಾಗುತ್ತಿದೆ. ರೈತರು ಕಬ್ಬನ್ನು ಕಳಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ ಆದರೆ ಕಬ್ಬು ಕಟಾವು ಮಾಡುವರು ಸಾಗಾಣಿಕೆ ಮಾಡುವರು ರೈತರಿಂದ ಅಕ್ರಮವಾಗಿ ಹಣ ವಸೂಲಿಯನ್ನು ಮಾಡುತ್ತಿದ್ದಾರೆಂದು ರೈತರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ .
ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ತಾಲೂಕುಗಳಲ್ಲಿ ಕಬ್ಬು ಕಟಾವು ಹಂಗಾಮು ಭರದಿಂದ ಸಾಗಿದೆ. ವರ್ಷವಿಡಿ ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿದು ರೈತರು ಕಬ್ಬನ್ನು ಅತ್ಯಂತ ಖುಷಿಖುಷಿಯಾಗಿ ಕಾರ್ಖಾನೆಗಳಿಗೆ ಕಳುಹಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಕಬ್ಬು ಕಟಾವು ಮಾಡುವವರು ಹಾಗೂ ಕಬ್ಬನ್ನು ಸಾಗಾಣಿಕೆ ಮಾಡುವವರು ರೈತರಿಂದ ಅಕ್ರಮವಾಗಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಅತಿಯಾದ ಮಳೆ, ಪ್ರವಾಹದಿಂದ ಕಬ್ಬುಗಳು ರೈತರ ನಿರೀಕ್ಷೆಯಂತೆ ಇಳುವರಿಯನ್ನು ನೀಡುತ್ತಿಲ್ಲ.
ಇದರಿಂದ ರೈತರು ಬೆಳೆಗಾಗಿ ಮಾಡಿದ ಸಾಲವನ್ನು ಮರುಪಾವತಿ ಮಾಡುತ್ತಿಯೋ ಅಥವಾ ಇಲ್ಲವೋ ಎಂಬ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇಂಥದರಲ್ಲಿ ಗಾಯದ ಮೇಲೆ ಬರೆ ಎಂಬಂತೆ ರೈತರಿಂದ ಪ್ರತಿ ಎಕರೆಗೆ ಕಬ್ಬು ಕಟಾವು ಮಾಡಲು ಸಾಗಾಣಿಕೆ ಮಾಡಲು 5-6 ಸಾವಿರ ರೂಪಾಯಿ ಅಕ್ರಮವಾಗಿ ರೈತರಿಂದ ಹಣವನ್ನು ವಸೂಲಿ ಮಾಡಲಾಗುತ್ತಿದೆ ಎಂದು ರೈತರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ ಹಾಗೂ ಕಬ್ಬು ಸಾಗಾಣಿಕೆ ಮಾಡುವ ವಾಹನಗಳಿಗೆ ಸಕ್ಕರೆ ಕಾರ್ಖಾನೆಗಳು ಹಣವನ್ನು ಪಾವತಿಸುತ್ತಾರೆ. ಆದರೆ ಇವರು ರೈತರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವುದು ನಿಜಕ್ಕೂ ವಿಷಾದಕರ ಸಂಗತಿ ಎಂದು ಹೇಳಬಹುದು. ಇಂತಹ ರೈತರಿಂದ ಅಕ್ರಮವಾಗಿ ಹಣ ವಸೂಲಿ ಮಾಡುವ ಕಾರ್ಮಿಕರಿಗೆ ಕಬ್ಬು ಸಾಗಾಣಿಕೆಯ ಮಾಡುವ ವಾನಗಳ ವಿರುದ್ಧ ಸಕ್ಕರೆ ಕಾರ್ಖಾನೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಜರುಗಿಸಬೇಕೆಂದು ರೈತ ಸಂಘದ ಮುಖಂಡರಾದ ಮಂಜುನಾಥ ಪರಗೌಡಯವರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ರೈತರಿಂದ ಕಬ್ಬು ಕಟಾವು ಮಾಡಲು, ಸಾಗಾಣಿಕೆಗೆ ಅಕ್ರಮವಾಗಿ ಹಣ ವಸೂಲಿ ಮಾಡುವರ ವಿರುದ್ಧ ಕ್ರಮ ಜರುಗಿಸಿ ರೈತರಿಂದ ಅಕ್ರಮವಾಗಿ ಹಣ ವಸೂಲಿಗೆ ಬ್ರೇಕ್ ಹಾಕಬೇಕಾಗಿದೆ…