ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಹಾರಿಸಲಾಗಿರುವ ಕನ್ನಡ ಧ್ವಜವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದರೆ ಎಂಇಎಸ್ ಜೊತೆಗೂಡಿ ಬೃಹತ್ ರ್ಯಾಲಿ ನಡೆಸಲಾಗುವುದು. ಮನೆ ಮನೆಗಳ ಮೇಲೆ ಭಗವಾ ಧ್ವಜ ಹಾರಿಸಲಾಗುವುದು ಎಂದು ಬೆಳಗಾವಿಯಲ್ಲಿ ಶಿವಸೇನೆ ಮುಖಂಡರು ನಿರ್ಧಾರ ಪ್ರಕಟಿಸಿದರು.
ಬೆಳಗಾವಿ ಕೇಳ್ಕರ್ ಬಾಗ್ದಲ್ಲಿರುವ ಶಿವಸೇನೆ ಕಾರ್ಯಾಲಯದಲ್ಲಿ ಸೋಮವಾರ ಸಭೆ ನಡೆಸಿದ ಶಿವಸೇನೆ ಮುಖಂಡರು, ಕಾರ್ಯಕರ್ತರು, ಮಹಾನಗರ ಪಾಲಿಕೆ ಎದುರು ಹಾರಿಸಲಾದ ಕನ್ನಡ ಧ್ವಜದ ಬಗ್ಗೆಯೇ ಚರ್ಚಿಸಿದರು. ಕನ್ನಡ ಧ್ವಜವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದರೆ ಶಿವಸೇನೆಯಿಂದ ಬೃಹತ್ ರ್ಯಾಲಿ ನಡೆಸಿ ಮನೆ ಮನೆಗಳ ಮೇಲೆ ಮರಾಠಾ ಧ್ವಜ ಹಾರಿಸಲಾಗುವುದು ಎಂದರು.
ಈ ವೇಳೆ ಬೆಳಗಾವಿ ಜಿಲ್ಲಾ ಶಿವಸೇನೆ ಅಧ್ಯಕ್ಷ ಪ್ರಕಾಶ ಶಿರೋಳಕರ, ಕಾರ್ಯದರ್ಶಿ ಅರವಿಂದ ನಾಗನೂರೆ, ಸಚಿನ್ ಗೋರಲೆ, ಪ್ರದೀಪ ಬೈಲೂರಕರ್, ಪ್ರವೀಣ ತೇಜಂ, ರಾಜಕುಮಾರ್ ರೋಖಡೆ ಮತ್ತಿತರರು ಇದ್ದರು.