ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಡಿಸೆಂಬರ್ ೨೮ ರಂದು ಕನ್ನಡ ಬಾವುಟ ಹಾರಿಸಲು ನೇತೃತ್ವ ವಹಿಸಿದ್ದ ಕನ್ನಡಪರ ಹೋರಾಟಗಾರ ಶ್ರೀನಿವಾಸ್ ತಾಳೂಕರ ಅವರ ಅಂಗಡಿ ಹಾಗೂ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿದ ನಂತರ ನಾಡದ್ರೋಹಿಗಳು ಶ್ರೀನಿವಾಸ್ ತಾಳೂಕರ ಅವರ ಅಂಗಡಿ ಹಾಗೂ ಮನೆಗೆ ಹೊಸವರ್ಷದ ಮಧ್ಯರಾತ್ರಿಯಂದು ಬೆಂಕಿ ಇಟ್ಟು ಕಿಡಿಗೇಡಿತನ ಪ್ರದರ್ಶಿಸಿದ್ದರು. ಈಗ ಮತ್ತೆ ಕನ್ನಡ ಧ್ವಜ ವಿವಾದ ಭುಗಿಲ್ಲೆದ್ದಿದೆ. ಶಿವಸೇನೆ ಹಾಗೂ ಎಂಇಎಸ್ ಕಿಡಿಗೇಡಿಗಳು ಕನ್ನಡ ಧ್ವಜ ಹಾರಿಸಿದ್ದನ್ನು ಕೆಣಕಿದ್ದು ಮುಂಜಾಗ್ರತಾ ಕ್ರಮವಾಗಿ ತಾಳೂಕರ ಅವರ ಅಂಗಡಿ ಹಾಗೂ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಒಟ್ಟಿನಲ್ಲಿ ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸಿರುವುದೇ ತಪ್ಪು ಎನ್ನುವಂತೆ ವರ್ತಿಸುತ್ತಿರುವ ಎಂಇಎಸ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.