Belagavi

ಕಡೋಲಿಯಲ್ಲಿ 36ನೇ ಮರಾಠಿ ಸಾಹಿತ್ಯ ಸಮ್ಮೇಳನ: ಮರಾಠಿ ಸಾಹಿತ್ಯ, ಸಂಸ್ಕೃತಿ ಪರಂಪರೆ ಉಳಿವು, ಬೆಳವಣಿಗೆಗೆ ಕರೆ

Share

ಬೆಳಗಾವಿ ತಾಲೂಕು ಕಡೋಲಿಯಲ್ಲಿ ತಾಲೂಕು ಮಟ್ಟದ 36ನೇ ಮರಾಠಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು.

ಸಂಕಷ್ಟಗಳ ನಡುವೆಯೂ ಮರಾಠಿ ಭಾಷೆ, ಸಾಹಿತ್ಯ, ಸಂಸ್ಕøತಿ ಪರಂಪರೆ ಅಮರ. ಈ ಪರಂಪರೆಯನ್ನು ಉಳಿಸಿ ಬೆಳೆಸಲು ಸಾಹಿತಿಗಳು, ಸಾಹಿತ್ಯಾಸಕ್ತರು ನಡೆಸಿರುವ ಪ್ರಯತ್ನ ಮುಂದುವರಿಯಬೇಕು ಎಂದು ಮುಖ್ಯ ಅತಿಥಿಗಳು, ಸಮ್ಮೇಳನದ ಅಧ್ಯಕ್ಷರು ಆಶಿಸಿದರು.

ಬೆಳಗಾವಿ ತಾಲೂಕು ಕಡೋಲಿಯಲ್ಲಿ ತಾಲೂಕು ಮಟ್ಟದ 36ನೇ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಯಮಿ ಅಶೋಕ ಪರಶುರಾಮ ನಾಯಕ ಭಾನುವಾರ ಉದ್ಘಾಟಿಸಿದರು. ಮಹೇಶ ಬಸವಂತ ಹೊನಗೇಕರ ಸಮ್ಮೇಳನದ ವೇದಿಕೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಈ ವೇಳೆ ಜಿಎಸ್‍ಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಸಾಹಿತಿ ಮಾಧುರಿ ಶಾನಭಾಗ್ ಮಾತನಾಡಿ, ಕೊರೋನಾ ಸಂಕಷ್ಟ ಕಾಲದಲ್ಲಿ ಗಡಿ ನಾಡಿನಲ್ಲಿ ಮರಾಠಿ ಭಾಷೆ, ಸಾಹಿತ್ಯ, ಸಂಸ್ಕøತಿಯ ವೈಭವಕ್ಕೆ ಹಿನ್ನೆಡೆಯಾಗಿದೆ. ಆದರೆ ಇದರಿಂದ ಎದೆಗುಂದಬೇಕಿಲ್ಲ. ಸಂಕಷ್ಟಗಳು ಶಾಶ್ವತವಲ್ಲ. ಭಾಷೆ, ಸಂಸ್ಕøತಿ, ಪರಂಪರೆಗಳು ಅಮರ. ಅವರು ಜನರ ಆಸಕ್ತಿಯ ನಡುವೆ ಬೆಳೆಯಬೇಕು, ಉಳಿದು ಬೆಳಗಬೇಕು ಎಂದರು.
ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ವಿವಿಧ ಗೋಷ್ಠಿಗಳಲ್ಲಿ ವಿದ್ವಾಂಸರು ಉಪನ್ಯಾಸ ನೀಡಿದರು. ಸಾಹಿತಿಗಳು, ಸಾಹಿತ್ಯಾಸಕ್ತರು, ಕಡೋಲಿ ಗ್ರಾಮಸ್ಥರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

Tags:

error: Content is protected !!