ಇಲ್ಲೊಂದು ಹೋರಿ ಬರೊಬ್ಬರಿ ಐದು ಲಕ್ಷ ಐವತ್ತು ಸಾವಿರ ರೂಪಾಯಿಗೆ ಮಾರಾಟ ಆಗುವ ಮೂಲಕ ದಾಖಲೆ ನಿರ್ಮಿಸಿದೆ. ಇನ್ನು ಹೋರಿ ಮಾಲೀಕರು ಅತ್ಯಂತ ಸಂಭ್ರಮ ಸಡಗರದಿಂದ ವಾದ್ಯವೃಂದದೊಂದಿಗೆ ಆ ಹೋರಿಯನ್ನು ಬಿಳ್ಕೊಟ್ಟಿದ್ದಾರೆ. ಇದು ಎಲ್ಲಿ ಅಂತೀರಾ ಹಾಗಾದ್ರೆ ಈ ವರದಿ ನೋಡಿ..
ಹೋರಿಯ ಸುತ್ತಮುತ್ತಲೂ ತಲೆ ಮೇಲೆ ಪೇಟಾ ಸುತ್ತಿಕೊಂಡು ನಿಂತಿರುವ ಜನವೋ ಜನ..ವಾದ್ಯವೃಂದದ ನೀನಾದ..ಬಂದಿರುವ ಅತಿಥಿಗಳಿಗೆ ಊಟೋಪಚಾರ..ಹೌದು ನೋವು ನೋಡುತ್ತಿರುವ ಈ ದೃಶ್ಯ ಯಾವುದಾದ್ರೂ ಮದುವೆ ಕಾರ್ಯಕ್ರಮನಾ ಎಂದರೆ ನಿಮ್ಮ ಊಹೆ ತಪ್ಪು..ರಾಯಬಾಗ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಸಮೀಪವಿರುವ ಕುರಬಗೋಡಿ ಎಂಬ ತೋಟದಲ್ಲಿ ತಮ್ಮ ಪ್ರೀತಿಯಿಂದ ಸಾಕಿದ್ದ ಹೋರಿಯನ್ನು ಮಾರಾಟ ಮಾಡಿ ಕಳಿಸುತ್ತಿರುವ ದೃಶ್ಯವನ್ನು.
ಹೌದು ನೀವು ನೋಡುತ್ತಿರುವ ಈ ಜಬರ್ದಸ್ತಾದ ಹೋರಿ ಅಶೋಕ ಶ್ರೀಮಂತ ಕುರಿ ಎಂಬುವರು ಸಾಕೀದ ಕೀಲಾರಿ ಜಾತಿಯ ಹೋರಿ. ಬರೊಬ್ಬರಿ ಐದು ಲಕ್ಷ ಐವತ್ತು ಸಾವಿರ ರೂಪಾಯಿಗೆ ಮಾರಾಟವಾಗಿದೆ. ಈ ಹೋರಿಗೆ ಕೇವಲ ಮೂರುವರೆ ವರ್ಷ ತುಂಬಿದೆ. ಇನ್ನೂ ಅಶೋಕ ಶ್ರೀಮಂತ ಕುರಿರವರು ಮೂಲತಃ ರೈತ ಕುಟುಂಬದವರು ಕ್ರಮೇಣವಾಗಿ ಸಣ್ಣ ಹೋರಿ ಕರುಗಳನ್ನ ತೆಗೆದು ಕೊಂಡು ಬಂದು ಅವುಗಳನ್ನ ಚನ್ನಾಗಿ ಪಳಗಿಸಿ ಬೆಳೆಸಿ ರೈತರಿಗೆ ಮಾಡುವುದನ್ನೆ ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಹೀಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದಲ್ಲಿ ಅತೀ ಹೆಚ್ಚು ಬೆಲೆಗೆ ತಮ್ಮ ಹೋರಿಗಳನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಈ ಹೋರಿಯು ಬೆಳಗಾವಿಯ ಪಾಶ್ಚಾಪೂರ ರೈತ ಬಸಲಿಂಗ ಬಸವಣ್ಣಿ ಅಂಬಲಿ ಎಂಬುವರು ಐದು ಲಕ್ಷ ಐವತ್ತೊಂದು ಸಾವಿರ ರೂಪಾಯಿಗೆ ಖರೀದಿ ಮಾಡಿದ್ದಾರೆ. ಈ ಸಂಬಂಧ ಹೋರಿ ಮಾರಾಟ ಮಾಡಿದ ಅಶೋಕ ಕುರಿ ಒಳ್ಳೆಯ ರೀತಿ ಹೋರಿಯನ್ನು ಬೆಳೆಸಿದ್ದೇವೆ. ಎಲ್ಲ ರೈತರೂ ಹೋರಿ ಬೆಳೆಸುವುದನ್ನು ರೂಢಿಸಿಕೊಳ್ಳಬೇಕು. ಇನ್ನು ನಮ್ಮಲ್ಲಿ ಏಳೆಂಟು ಹೋರಿಗಳಿವೆ ಎಂದು ತಿಳಿಸಿದರು.
ನಂತರ ಮಾರುತಿ ಕಾಡಪ್ಪಾ ಹುಕ್ಕೇರಿ ಮಾತನಾಡಿ ನಮ್ಮ ಸ್ನೇಹಿತರಾದ ಪಾಶ್ಚಾಪೂರದ ರೈತ ಬಸಲಿಂಗ ಬಸವಣ್ಣಿ ಅಂಬಲಿ ಅವರಿಗೆ ಹೋರಿ ಕೊಡಿಸಿದ್ದೇವೆ. ಹೋರಿಯನ್ನು ಪ್ರದರ್ಶನಕ್ಕೆ ಇಡಲು ಖರೀದಿ ಮಾಡಿದ್ದಾರೆ. ಮನುಷ್ಯನಗಿಂತ ಹೆಚ್ಚಾಗಿ ಹೋರಿಯನ್ನು ರೈತರು ಬೆಳೆಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಒಟ್ಟಾರೆ ಕಟ್ಟುಮಸ್ತಾಗಿ ಹೋರಿಯನ್ನು ಬೆಳೆಸಿದ್ರೆ ನೀವು ಕೂಡ ದಾಖಲೆ ಬೆಲೆಯಲ್ಲಿ ನಿಮ್ಮ ಹೋರಿಯನ್ನು ಮಾರಾಟ ಮಾಡಬಹುದು ಎಂಬುದನ್ನು ಕುರಬಗೋಡಿ ರೈತ ಸಾಧಿಸಿ ತೋರಿದ್ದು ಸಧ್ಯ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.