ರಾಜ್ಯ ಬಿಜೆಪಿಯಲ್ಲಿ ರಾಜಾಹುಲಿ ಯಡಿಯೂರಪ್ಪ ವಿರುದ್ಧ ಯಾರೂ ಕಮಕ್ ಕಿಮಕ್ ಅಂತಿರಲಿಲ್ಲ. ಆದ್ರೆ ಈಗ ಯತ್ನಾಳ್ ಬಹಿರಂಗವಾಗಿಯೇ ಅಸಮಧಾನ ಹೊರಹಾಕಿದ್ದಾರೆ. ಸಂಕ್ರಾಂತಿ ನಂತರ ಸಿಎಂ ಬದಲಾವಣೆ ಗ್ಯಾರಂಟಿ ಎಂದು ಹೇಳಿದ್ದು. ಇಡೀ ರಾಜ್ಯ ರಾಜಕೀಯದಲ್ಲಿಯೇ ಸಂಚಲನ ಮೂಡಿಸಿದೆ. ಅಷ್ಟೇ ಅಲ್ಲದೇ ಇದು ವಿರೋಧಿಗಳಿಗೆ ಅಸ್ತ್ರವಾಗಿದೆ. ಆ ಕುರಿತು ಒಂದು ಪೊಲಿಟಿಕ್ ರಿಪೋರ್ಟ್ ಇಲ್ಲಿದೆ ನೋಡಿ..
ಹೌದು ಯಡಿಯೂರಪ್ಪ ರಾಜ್ಯ ಬಿಜೆಪಿಯ ಮಾಸ್ ಲೀಡರ್..ವಯಸ್ಸು 78 ದಾಟಿದ್ರೂ ಯಡಿಯೂರಪ್ಪ ಸ್ಥಾನ ತುಂಬಬಲ್ಲ ಯಾವೊಬ್ಬ ನಾಯಕರು ಕಮಲ ಪಾಳೇಯದಲ್ಲಿ ಸಿಗೋದಿಲ್ಲ. ಅಷ್ಟರ ಮಟ್ಟಿಗೆ ತಮ್ಮ ವರ್ಚಸ್ಸು ಉಳಿಸಿಕೊಂಡಿರುವ ಬಿಎಸ್‍ವೈ ನಾಲ್ಕನೆ ಬಾರಿ ಸಿಎಂ ಆಗಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇಷ್ಟು ದಿನ ರಾಜಾಹುಲಿ ನಾಯಕತ್ವದ ವಿರುದ್ಧ ಯಾರೂ ಅಪಸ್ವರ ಎತ್ತಿರಲಿಲ್ಲ. ಆದ್ರೆ ಈಗ ಕಾಲ ಬದಲಾಗಿದೆ. ಒಂದು ಕಾಲದ ಅವರ ಶಿಷ್ಯ ಯತ್ನಾಳ್ ಈಗ ಸ್ವತಃ ಅವರ ವಿರುದ್ಧವೇ ಸಿಡಿದೆದ್ದಿದ್ದಾರೆ. ಇತ್ತಿಚೆಗೆ ಯತ್ನಾಳ ನೀಡಿದ ಹೇಳಿಕೆ ಯಡಿಯೂರಪ್ಪ ನಾಯಕತ್ವದ ಬಗ್ಗೆಯೇ ಪ್ರಶ್ನೆ ಮಾಡುವಂತಿತ್ತು. ಉತ್ತರಾಯಣ ಬಳಿಕ ಎಲ್ಲವೂ ಬದಲಾಗುತ್ತೆ..ಸಿಎಂ ಬದಲಾವಣೆ ಆಗುವುದು ಗ್ಯಾರಂಟಿ..ಸಿಎಂ ಸ್ಥಾನ ಉತ್ತರಕರ್ನಾಟಕಕ್ಕೆ ಸಿಗುತ್ತೆ ಎಂದು ಯತ್ನಾಳ್ ಹೇಳಿದ್ದರು.
: ಯತ್ನಾಳ್ ಈ ರೀತಿ ಹೇಳಿಕೆ ನೀಡುತ್ತಿದ್ದಂತೆ ಅಲರ್ಟ ಆಗಿರುವ ಸಿಎಂ ಬಿಎಸ್‍ವೈ ಹೊಸ ವರ್ಷದ ಹಿಂದಿನ ದಿನವೇ ಇನ್ನು ಎರಡು ವರ್ಷ ನಾನೇ ರಾಜ್ಯದ ಸಿಎಂ ಆಗಿರುತ್ತೇನೆ. ಯಾರೊ ಒಬ್ಬರು ಇಬ್ಬರು ಏನೋ ಹೇಳಿದ್ರೆ ಏನೂ ಆಗಲ್ಲ ಎನ್ನುವ ಮೂಲಕ ವಿರೋಧಿಗಳ ಹೆಸರು ಹೇಳದೇ ಟಾಂಗ್ ಕೊಟ್ಟಿದ್ದರು. ಆದ್ರೆ ಈಗ ಇದನ್ನೆ ದಾಳವಾಗಿ ಉಪಯೋಗಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜ.15ರ ಬಳಿಕ ಹೊಸ ನಾಯಕರು ಬರುತ್ತಾರೆ ಎಂದು ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಆದ್ರೆ ಸಿಎಂ ಬಿಎಸ್‍ವೈ 2 ವರ್ಷ ನಾನೇ ಸಿಎಂ ಅಂತಿದ್ದಾರೆ. ಈ ಹೇಳಿಕೆ ಬೇರೆ ಅರ್ಥ ಕೊಡುವಂತಿದೆ. ಅವರೇ ಸಿಎಂ ಅವರು ಸಿಎಂ ಅಲ್ಲವೆಂದು ಯಾರೂ ಹೇಳಿಲ್ಲ ಅವರ್ಯಾಕೆ ಎರಡೂವರೇ ವರ್ಷ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಒಟ್ಟಾರೆ ಸಿಎಂ ಬಿಎಸ್‍ವೈ ನಾಯಕತ್ವದ ವಿರುದ್ಧ ಸ್ವಪಕ್ಷಿಯರೇ ತಮ್ಮ ಅಸಮಾಧಾನ ಹೊರ ಹಾಕಿದ್ದು. ವಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತೆ ಆಗಿದ್ದು ಮಾತ್ರ ಸುಳ್ಳಲ್ಲ.