ಜೆಸಿಬಿ ಯಂತ್ರ ಬಡಿದು ಕೂಡಗಿ ಎನ್ ಟಿ ಪಿ ಸಿ ಯಲ್ಲಿ ಕರ್ತವ್ಯನಿರತ ಕಾರ್ಮಿಕ ಸಾವು ಪ್ರಕರಣ ಕ್ಕೆ ಸಂಬಂಧಿಸಿದಂತೆ ಮೃತನ ಸಂಭಂದಿಕರು ಹಾಗೂ ಉಳಿದ ಕಾರ್ಮಿಕರಿಂದ ಪ್ರತಿಭಟನೆ ನಡೆಯುತ್ತಿದೆ.
ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಎನ್ ಟಿ ಪಿ ಸಿ ಯಲ್ಲಿ ವಿಜಯಪುರ ನಿವಾಸಿ ರಮೇಶ ಉಳ್ಳಾಗಡ್ಡಿ(40) ಕಾರ್ಮಿಕ ಮೃತಪಟ್ಟಿದ್ದ. ಕೆಲಸ ಮುಗಿಸಿ ವಾಪಸ್ ಮನೆಗೆ ಬರುವ ವೇಳೆ ಎನ್ ಟಿ ಪಿ ಸಿ ಆವರಣದಲ್ಲಿ ಜೆಸಿಬಿ ಬಡಿದು ಮೃತಪಟ್ಟಿದ್ದ, ಕೂಡಗಿ ಎನ್ ಟಿ ಪಿ ಸಿ ಠಾಣೆ ವ್ಯಾಪ್ತಿ ಘಟನೆ ನಡೆದಿತ್ತು.