ಬೆಳಗಾವಿ ಪಾಲಿಕೆ ಪಾಲಿಕೆ ಮುಂದೆ ಭಗವಾ ಧ್ವಜ ಹಾರಿಸುವ ಉದ್ದೇಶದಿಂದ ಮಹಾರಾಷ್ಟ್ರ ಕೊಲ್ಲಾಪುರದಿಂದ ಶಿವಸೇನೆ ಪುಂಡರು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಪ್ಪಾಣಿ ಬಳಿಯ ಕೊಗನೊಳ್ಳಿ ಚೆಕ್ ಪೋಸ್ಟ್ ಹಾಗೂ ಬೆಳಗಾವಿ ತಾಲೂಕಿನ ಶಿನ್ನೋಳ್ಳಿ ಚೆಕ್ ಪೋಸ್ಟ್ ಬಳಿ ಬೀಗ ಪೆÇಲೀಸ್ ಭದ್ರತೆ ಕೈಗೊಳ್ಳಲಾಗಿದೆ.ಬೆಳಗಾವಿಯಲ್ಲಿ ಎಂಇಎಸ್ ರ್ಯಾಲಿ ರದ್ದು ಪಡಿಸಿದ್ದರೂ ಮಹಾರಾಷ್ಟ್ರದ ಕೊಲ್ಲಾಪುರದಿಂದ ಶಿವಸೇನೆ ಪುಂಡರು ಬೆಳಗಾವಿಯತ್ತ ಹೊರಟಿದ್ದಾರೆ. ಪಾಲಿಕೆ ಪಾಲಿಕೆ ಮುಂದೆ ಭಗವಾ ಧ್ವಜ ಹಾರಿಸುವ ಉದ್ದೇಶದಿಂದ ಮಹಾರಾಷ್ಟ್ರ ಕೊಲ್ಲಾಪುರದಿಂದ ಶಿವಸೇನೆ ಪುಂಡರು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಸೇರಿ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ನಿಪ್ಪಾಣಿ ಬಳಿಯ ಕೊಗನೊಳ್ಳಿ ಚೆಕ್ ಪೋಸ್ಟ್ ಹಾಗೂ ಬೆಳಗಾವಿ ತಾಲೂಕಿನ ಶಿನ್ನೋಳ್ಳಿ ಚೆಕ್ಪೋಸ್ಟ್ ಬಳಿ ಬಿಗಿ ಪೊಲೀಸ್ ಕಾವಲು ನಿಯೋಜಿಸಿದ್ದಾರೆ. ಗಡಿಯಲ್ಲಿ ಅಷ್ಟೇ ಅಲ್ಲ, ಬೆಳಗಾವಿ ಮಹಾನಗರ ಪಾಲಿಕೆ ಮುಂದಿನ ಕನ್ನಡ ಧ್ವಜಕ್ಕೂ ಬಿಗಿ ಪೆÇಲೀಸ್ ಭದ್ರತೆ ನಿಯೋಜಿಸಲಾಗಿದೆ.
ಒಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಎದುರು ಹಾರಿಸಿರುವ ಕನ್ನಡ ಧ್ವಜದ ವಿಷಯದಲ್ಲಿ ಮತ್ತೆ ರಾಜಕೀಯ ಆಟ ಶುರುವಿಟ್ಟುಕೊಂಡಿದ್ದು, ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ. ಎಂಇಎಸ್ ಹಟಮಾರಿ ಧೋರಣೆಯಿಂದ ಗಡಿ ನಾಡಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.