ಬೆಳಗಾವಿ ಉತ್ತರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಂಬಂಧ ವಿಶೇಷ ಅನುದಾನ ನೀಡುವಂತೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‍ಗೆ ಶಾಸಕ ಅನಿಲ್ ಬೆನಕೆ ಮನವಿ ಮಾಡಿಕೊಂಡರು.

ಎರಡು ದಿನಗಳ ಬೆಳಗಾವಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‍ರನ್ನು ಭೇಟಿಯಾದ ಶಾಸಕ ಅನಿಲ್ ಬೆನಕೆಕ್ಷೇತ್ರದಲ್ಲಿನ ಸ್ಮಾರ್ಟ ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗಳಿಗೆ ಹೊಂದಿಕೊಂಡಿರುವ ಒಳ ರಸ್ತೆಗಳು ಹಾಳಾಗಿರುವುದರಿಂದ ಒಳ ರಸ್ತೆಗಳ ನಿರ್ಮಾಣ ಮಾಡುವುದಕ್ಕೆ ಮತ್ತು ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಡ್ರೈನೇಜ ಪೈಪಲೈನಗಳು ಹಾಳಾಗುತ್ತಿದ್ದು, ಹೊಸ ಡ್ರೈನೇಜ ಪೈಪಲೈನ ವ್ಯವಸ್ಥೆ ನಿರ್ಮಾಣ ಮಾಡಲು ಮತ್ತು ನಗರದಲ್ಲಿನ ಪಾಟೀಲ ಮಾಳಾ , ಕೊನವಾಳ ಗಲ್ಲಿ ಹಾಗೂ ಸಮರ್ಥ ನಗರದಲ್ಲಿ ನಾಲಾ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಅನಿಲ್ ಬೆನಕೆ ತಿಳಿಸಿದ್ದಾರೆ.