Belagavi

ಉಚಿತ ಫಾಸ್ಟ ಪುಡ್ ಸ್ಟಾಲ್ ಉದ್ಯಮಿ ತರಬೇತಿಗೆ ಆಹ್ವಾನ

Share

ಬೆಳಗಾವಿ ಬೆಳಗಾವಿ ಜಿಲ್ಲೆಯ ಗ್ರಾಮೀಣ ಯುವಕ ಯುವತಿಯರಿಗಾಗಿ ಕೆನರಾ ಬ್ಯಾಂಕ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‍ಸೆಟಿ) ಬೆಳಗಾವಿಯಲ್ಲಿ, ಜನೇವರಿ 20ರಿಂದ 29ರವರಗೆ 10 ದಿನಗಳ ಅವಧಿಯ ಫಾಸ್ಟ್ ಪುಡ್ ಸ್ಟಾಲ್ ಉದ್ಯಮಿ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಭಾಗವಹಿಸಲಿರುವ ಅಭ್ಯರ್ಥಿಗಳು 18 ರಿಂದ 45 ವರ್ಷದ ವಯೋಮಿತಿಯಲ್ಲಿರಬೇಕು, ತರಬೇತಿ ಪಡೆದ ನಂತರ ಸ್ವ-ಉದ್ಯೋಗ ಕೈಗೊಳ್ಳಲು ಸಿದ್ಧರಿರಬೇಕು. ತರಬೇತಿಯು ಉಚಿತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ. ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು, ಬಿಳಿ ಹಾಳೆಯ ಮೇಲೆ ಹಾಗೂ ನಮ್ಮ ಸಂಸ್ಥೆಯಲ್ಲಿ ದೊರೆಯು ಅರ್ಜಿ ನಮೂನೆಯಲ್ಲಿ ತಮ್ಮ ಹೆಸರು, ವಿಳಾಸ, ಮುಂತಾದ ಮಾಹಿತಿಗಳನ್ನು ಬರೆದು ಅರ್ಜಿಯ ಜೊತೆ ಆಧಾರಕಾರ್ಡ ಮತ್ತು ರೇಶನ್‍ಕಾರ್ಡ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಜನೇವರಿ 20 ರೊಳಗಾಗಿ, ಕೆನರಾ ಬ್ಯಾಂಕ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‍ಸೆಟಿ) ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್‍ಸೆಟಿ) ಪ್ಲಾಟ ನಂ ಸಿಎ-03 (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಏರಿಯಾ, ಆಟೋ ನಗರ, ಬೆಳಗಾವಿ. ದೂರವಾಣಿ ಸಂಖ್ಯೆ 0831-2440644, 8296792166, 8660038694, 9845750043. 8867388906 ಇವರನ್ನು ಸಂಪರ್ಕಿಸಲು ಕೆನರಾ ಬ್ಯಾಂಕ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‍ಸೆಟಿ) ನಿರ್ದೇಶಕರು, ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:

error: Content is protected !!