Kagawad

ಉಗಾರ ಖುರ್ದ ಪಟ್ಟಣದಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಎಲ್ಲಮ್ಮ ದೇವಿ ಮಂದಿರ ಕಟ್ಟಡದ ಅಡಿಗಲ್ಲು ಪೂಜೆ

Share

ಉಗಾರ ಖುರ್ದ ಪಟ್ಟಣದಲ್ಲಿ ಹಿಂದು ಮತ್ತು ಮುಸ್ಲಿಂ ಮಂದಿರ, ದರ್ಗಾಗಳಿವೆ. ಆದರೆ, ಶ್ರೀ ಎಲ್ಲಮ್ಮಾ ದೇವಿ ಮಂದಿರದ ಕೊರತೆಯಿತ್ತು. ದೇವಿ ಭಕ್ತರಿಗಾಗಿ ಸುಮಾರು 55 ಲಕ್ಷ ರೂ. ವೆಚ್ಚದಲ್ಲಿ ಮಂದಿರ ಕಟ್ಟಡ ಕಾಮಗಾರಿ ಕೈಗೊಂಡಿದ್ದೇವೆಯೆಂದು ಖ್ಯಾತ ವೈದ್ಯರಾದ ಡಾ. ಪಿ.ವ್ಹಿ.ಜೋಗ ಹೇಳಿದರು.

ಬುಧವಾರ ರಂದು ಬೆಳಿಗ್ಗೆ ಉಗಾರ ಖುರ್ದ ಪಟ್ಟಣದಲ್ಲಿ ಶ್ರೀ ಎಲ್ಲಮ್ಮಾ ದೇವಿ ಮಂದಿರ ಕಟ್ಟಡದ ಗುದಲಿಪೂಜೆ ಕಾರ್ಯಕ್ರಮ ನೆರವೇರಿತು.

ಮಂದಿರ ಕಟ್ಟಡದ ಉಸ್ತುವರಿ ವಹಿಸಿರುವ ಡಾ. ಪಿ.ವ್ಹಿ.ಜೋಗ ಮಾತನಾಡಿ, ಕಳೇದ ಅನೇಕ ವರ್ಷಗಳಿಂದ ಎಲ್ಲಮ್ಮಾ ದೇವಿ ಮಂದಿರ ಕಟ್ಟಡದ ಬೇಡಿಕೆ ಹೆಚ್ಚಾಗಿತ್ತು. ಇದನ್ನು ಆಲಿಸಿದ ಗ್ರಾಮದ ಸಕ್ಕರೆ ಉದ್ಯಮಿಗಳಾದ ಶಿರಗಾಂವಕರ ಬಂಧುಗಳು ಮುಂದಾಗಿ 5 ಲಕ್ಷ ರೂ. ಮತ್ತು ಸಕ್ಕರೆ ಕಾರ್ಮಿಕರು 1 ದಿನದ ವೇತನ ನೀಡಲು ಮುಂದಾಗಿದ್ದರಿಂದ ಬಹುದಿನಗಳ ಬೇಡಿಕೆಯಾಗಿರುವ ಈ ಮಂದಿರದ ಅಡಿಗಲ್ಲು ಪೂಜೆ ನೆರವೇರುತ್ತಿದೆಯೆಂದು ಹೇಳಿದರು.

ಮಂದಿರ ಕಟ್ಟಡದ ಉಸ್ತುವರಿ ವಹಿಸಿರುವ ದಾದೋಬಾ ಥೋರುಶೆ ಮಾಹಿತಿ ನೀಡುವಾಗ, ಮಂದಿರ ಕಟ್ಟಡಕ್ಕಾಗಿ ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ 1.25 ಲಕ್ಷ, ತಲಾ 10 ಸಾವಿರರಂತೆ 150 ಭಕ್ತರು ಹಣ ದಾನವಾಗಿ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಯ ನಿವೃತ್ತ ಅಧಿಕಾರಿ ಬಾಳಾಸಾಹೇಬ ಥೋರುಶೆ ಮೂರ್ತಿ ದಾನವಾಗಿ ನೀಡುತ್ತಿದ್ದು, ಕನ್ನಡ ಯುವಕ ಸಂಘದ ಅಧ್ಯಕ್ಷ ಡಾ. ಸಿದ್ದಗೌಡಾ ಕಾಗೆ ಶೀಖರ ನಿರ್ಮಿಸುವ ಘೋಷಣೆ ಮಾಡಿದ್ದಾರೆ. ಇದೇ ರೀತಿ ಉಗಾರದ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಬಾದಶಾಃ ಜಮಾದಾರ ಇವರು ಎಲ್ಲ ರೀತಿಯ ನೆರವು ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.

ಈ ವೇಳೆ ಉಮೇಶ ಪಾಟೀಲ, ರಾಜೇಂದ್ರ ನಾಗಾವೆ, ರಾಜು ಗುರವ್, ಸುರೇಶ ಕುಸನಾಳೆ, ಇನ್ನೀತರರು ಪಾಲ್ಗೊಂಡಿದ್ದರು.

Tags:

error: Content is protected !!