Events

ಉಗಾರ್ ಲಾಯನ್ಸ್ ಕ್ಲಬ್‍ನಿಂದ ಪತ್ರಿಕಾ ದಿನಾಚರಣೆ ನಿಮಿತ್ಯ ಪತ್ರಕರ್ತರಿಗೆ ಸನ್ಮಾನ

Share

ರಾಷ್ಟ್ರೀಯ ಪತ್ರಿಕಾ ದಿನಾಚರಣಾ ಅಂಗವಾಗಿ ಉಗಾರ ಲಾಯನ್ಸ್ ಕ್ಲಬ್ ವತಿಯಿಂದ ಪತ್ರಕರ್ತರಿಗೆ ಸತ್ಕರಿಸುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.

ಬುಧವಾರ ಸಂಜೆ ಉಗಾರ ಖುರ್ದ ಪಟ್ಟಣದ ದಿ ಉಗಾರ ಶುಗರ್ ವಕ್ರ್ಸ್ ಸಕ್ಕರೆ ಕಾರ್ಖಾನೆ ಸಭಾ ಭವನದಲ್ಲಿ ರಾಷ್ಟ್ರೀಯ ಪತ್ರೀಕಾ ದಿನಾಚರಣೆ ಅಂಗವಾಗಿ ಉಗಾರ ಲಾಯನ್ಸ್ ಕ್ಲಬ್ಬಿನ ಅಧ್ಯಕ್ಷ ಶಶೀಕಾಂತ ಜೋಶಿ ಇವರ ಅಧ್ಯಕ್ಷತೆಯಲ್ಲಿ ಪತ್ರಕರ್ತರಿಗೆ ಸನ್ಮಾನಿಸಲಾಯಿತು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು ಮತ್ತು ಇನ್ ವಾಹಿನಿ ವರದಿಗಾರರಾದ ಸುಕುಮಾರ ಬನ್ನೂರೆ, ಮರಾಠಿ ಪತ್ರಿಕೆಗಳ ವರದಿಗಾರರಾದ ಪ್ರಭಾಕರ ಗೊಂಧಳಿ, ರಂಗನಾಥ ದೇಶಿಂಗಕರ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.

ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಶಶೀಕಾಂತ ಜೋಶಿ ಮಾತನಾಡಿ, ಮಾಧ್ಯಮ ಸಮಾಜದ 4ನೇ ಸ್ಥಂಬ. ಸ್ವಾತಂತ್ರ್ಯ ಪೂರ್ವದಲ್ಲಿಯ ಮತ್ತು ಇಂದಿನ ಮಾಧ್ಯಮಗಳಲ್ಲಿ ಬದಲಾವಣೆವಾಗಿದ್ದು, ಪತ್ರೀಕೆಗಳಲ್ಲಿ ಮತ್ತು ಮಾಧ್ಯಮದಲ್ಲಿ ಶೀಘ್ರದಲ್ಲಿ ಸುದ್ದಿಗಳು ಪ್ರಕಟಗೊಂಡು ಸಮಾಜದಲ್ಲಿಯ ಆಗು-ಹೋಗುವ ಘಟಣೆಗಳು ಭಿತ್ತರಿಸುತ್ತಿವೆ. ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳು ಸರಕಾರದ ಕಣ್ಣಿಗೆ ಕಾಣದಂತಹ ಸಮಸ್ಯೆಗಳು ಹೋರಹಾಕುವ ಮಾಧ್ಯಮದ ಕಾರ್ಯ ಶ್ರೇಷ್ಠವಾಗಿದೆ. ಪತ್ರೀಕೆ ದಿನಾಚರಣೆ ಅಂಗವಾಗಿ ಅವರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯವೆಂದರು.

ಸಮಾರಂಭದಲ್ಲಿ ಲಾಯನ್ಸ್ ಕ್ಲಬ್ ಸದಸ್ಯ ಸಚೀನ ಪೋತದಾರ, ಮನೋಜ ಮಾಲಗತ್ತೆ, ಡಾ. ಎಂ.ಬಿ.ಸಾಬಡೆ, ಆರ್.ಕೆ.ಹೆಗ್ಡೆ, ಬಿ.ಬಿ.ಹೊನ್ನಣ್ಣವರ, ಮಾಜಿ ಅಧ್ಯಕ್ಷ ಸುಭಾಷ ಹೆಬ್ಬಾಳೆ, ಬಿ.ಬಿ.ಕಾಗೆ, ಬಿ.ಬಿ.ಚೌಗುಲಾ ಇವರು ಮಾಧ್ಯಮದ ಆಗು-ಹೋಗುಗಳ ಬಗ್ಗೆ ಮಾತನಾಡಿದರು.

ಸಮಾರಂಭದಲ್ಲಿ ಲಾಯನ್ಸ್ ಕ್ಲಬ್ಬಿನ ಸಂಚಾಲಕರಾದ ಜ್ಯೋತಿಕುಮಾರ ಪಾಟೀಲ, ಶ್ರೀಕಾಂತ ಭಟ್ಟ, ಪ್ರಾಚಾರ್ಯ ಪಿ.ಬಿ.ಕುಲಕರ್ಣಿ, ರಾಮಚಂದ್ರ ಕಿಲ್ಲೇದಾರ, ಬಾಳಾಸಾಹೇಬ ವಿಸಾಪುರೆ, ಆದಿನಾಥ ಬಿಂದಗೆ, ಸೇರಿದಂತೆ ಅನೇಕರು ಇದ್ದರು.

Tags:

error: Content is protected !!