ರಾಜ್ಯ ಸಂಪುಟಕ್ಕೆ ವರಿಷ್ಠರ ಸೂಚನೆಯಂತೆ ಸಚಿವರನ್ನು ಸೇರ್ಪಡೆ ಮಾಡಲಾಗಿದೆ. ಸಂಪುಟ ವಿಸ್ತರಣೆಯಿಂದ ಅಸಮಾಧಾನ ಹೊರ ಹಾಕುತ್ತಿರುವ ಶಾಸಕರು ಹಗುರವಾಗಿ ಮಾತನಾಡುವುದು ಬೇಡ. ದೆಹಲಿಗೆ ಹೋಗಿ ವರಿಷ್ಠರ ಜತೆ ಮಾತಾಡಲಿ. ಇದಕ್ಕೆ ಯಾರ ಅಭ್ಯಂತರವೂ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಸಂಪುಟ ವಿಸ್ತರಣೆಯಿಂದ ಯಾವುದೇ ಶಾಸಕರಿಗೆ ಅಸಮಾಧಾನ ಇದ್ದರೆ ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ಕೊಡಲಿ. ಬೇಕಾದಂತೆ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಬೇಡ. ಸರಿ ತಪ್ಪು ಯಾವುದು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದು ಖಡಕ್ ಸಂದೇಶ ನೀಡಿದರು.
ಒಟ್ಟಿನಲ್ಲಿ ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡವರಿಗೆ ವರಿಷ್ಠರಿಗೆ ದೂರು ಕೊಡಲು ತಿಳಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ. ತಾವು ವರಿಷ್ಠರ ಸೂಚನೆಯಂತೆ ಸಂಪುಟಕ್ಕೆ ಸಚಿವರನ್ನು ಸೇರ್ಪಡೆ ಮಾಡಿರುವುದಾಗಿ ತಿಳಿಸಿದ್ದಾರೆ.