Chikkodi

ಇನ್ ನ್ಯೂಸ್ ಇಂಪಾಕ್ಟ್ ಮಾಂಜರಿಯಲ್ಲಿ ಕನ್ನಡಮಯವಾದ ಪ್ಲೆಕ್ಸಗಳು….

Share

ಮಾಂಜರಿ ಗ್ರಾಮದಲ್ಲಿ ಇತ್ತೀಚೆಗೆ ಬೃಹತ್ ಪ್ರಮಾಣದಲ್ಲಿ ಮರಾಠಿ ಭಾμÉಯಲ್ಲಿ ಫ್ಲೆಕ್ಷಗಳನ್ನು ಹಾಕಲಾಗಿತ್ತು. ಈ ಕುರಿತಂತೆ ಕನ್ನಡ ನೆಲದಲ್ಲಿ ಮರಾಠಿ ಭಾಷೆಯಲ್ಲಿ ಪ್ಲೆಕ್ಸ್ ಗಳು ರಾರಾಜಿಸುತ್ತಿವೆ ಈ ಕುರಿತಂತೆ ಇನ್ ನ್ಯೂಸ್ ವಿಸ್ತೃತವಾಗಿ ಸುದ್ದಿಯನ್ನು ಪ್ರಸಾರ ಮಾಡಿತ್ತು.ಈ ಸುದ್ದಿ ಪ್ರಸಾರ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಮರಾಠಿ ಭಾಷಿಕರು ಮರಾಠಿ ಭಾಷೆಯ ಫ್ಲೆಕ್ಸ್ ಗಳನ್ನು ತೆರವುಗೊಳಿಸಿ ಕನ್ನಡ ಭಾμÉಯಲ್ಲಿ ಫ್ಲೆಕ್ಷಗಳನ್ನು ಅಳವಡಿಸಿದ್ದಾರೆ. ಇದು ಇನ್ ನ್ಯೂಸ್‍ನ ಇಂಪ್ಯಾಕ್ಟ್..

ಹೌದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮವಿದು ಕರ್ನಾಟಕದಲ್ಲಿ ಬರತಕ್ಕಂತಹ ಒಂದು ಗ್ರಾಮ.ಈ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತ ಸದಸ್ಯರಿಗೆ ಶುಭಾಶಯಗಳನ್ನು ಕೋರುವ ಉದ್ದೇಶದಿಂದ ಮರಾಠಿ ಭಾಷೆಯಲ್ಲಿ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು.

ಇದು ಕನ್ನಡ ಅಭಿಮಾನಿಗಳಿಗೆ ಹಾಗೂ ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾಗಿತ್ತು.ಈ ಬೆನ್ನಲ್ಲಿಯೇ ಇನ್ ನ್ಯೂಸ್ ಕನ್ನಡ ಭಾμÉಯ ಅಳಿವು-ಉಳಿವು ದೃಷ್ಟಿಕೋನದಿಂದ ಈ ಮರಾಠಿ ಫ್ಲೆಕ್ಸಗಳ ಕುರಿತು ವಿಸ್ತೃತವಾದ ವರದಿ ಪ್ರಸಾರ ಮಾಡಿತ್ತು.ಈ ವರದಿ ಇಂದ ಎಚ್ಚೆತ್ತ ಮಾಂಜರಿ ಗ್ರಾಮದ ಮರಾಠಿ ಭಾಷಿಕರು ಮರಾಠಿ ಭಾμÉಯಲ್ಲಿ ಹಾಕಿದಂತಹ ಫ್ಲೆಕ್ಸಗಳನ್ನು ತೆರವುಗೊಳಿಸಿ, ಕನ್ನಡ ಭಾμÉಯಲ್ಲಿ ಫ್ಲೆಕ್ಸಗಳನ್ನು ಹಾಕಿ ಕನ್ನಡ ಭಾಷೆಭಿಮಾನವನ್ನು ತೋರಿದ್ದಾರೆ. ಇದು ಇನ ನ್ಯೂಸನ ಇಂಪಾಕ್ಟ್…..

Tags:

error: Content is protected !!